Select Your Language

Notifications

webdunia
webdunia
webdunia
webdunia

ಸಂಜನಾ ಕ್ಷಮೆ ಕೇಳಿದ್ದರ ಹಿಂದೆ ಏನೋ ಇದೆ ಎಂದ ಶೃತಿ ಹರಿಹರನ್

ಸಂಜನಾ ಕ್ಷಮೆ ಕೇಳಿದ್ದರ ಹಿಂದೆ ಏನೋ ಇದೆ ಎಂದ ಶೃತಿ ಹರಿಹರನ್
ಬೆಂಗಳೂರು , ಗುರುವಾರ, 15 ನವೆಂಬರ್ 2018 (09:49 IST)
ಬೆಂಗಳೂರು: ಮೀ ಟೂ ಅಭಿಯಾನದಡಿಯಲ್ಲಿ ಗಂಡ ಹೆಂಡತಿ ಸಿನಿಮಾ ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಆರೋಪ ಮಾಡಿ ಕೊನೆಗೆ ಕ್ಷಮೆ ಯಾಚಿಸಿದ ನಟಿ ಸಂಜನಾ ನಡೆ ಹಿಂದೆ ಬೇರೇನೋ ಇದೆ ಎಂದು ನಟಿ ಶೃತಿ ಹರಿಹರನ್ ಆರೋಪಿಸಿದ್ದಾರೆ.

ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಅಭಿಯಾನದಡಿಯಲ್ಲಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಶೃತಿ, ಸಂಜನಾ ನಡೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಆಕೆ ಒತ್ತಡಕ್ಕೆ ಒಳಗಾಗಿ ಕ್ಷಮೆ ಯಾಚಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

‘ನಾನೆಂದೂ ಸಂಜನಾ ರೀತಿ ಕ್ಷಮೆ ಕೇಳಲಾರೆ. ಸಂಜನಾ ಕ್ಷಮೆ ಕೇಳಿದ್ದನ್ನು ನೋಡಿ ನಿಜಕ್ಕೂ ಬೇಸರವಾಯಿತು. ಆಕೆಯ ಮನಸ್ಥಿತಿ ಹೇಗಿರಬಹುದು ಎಂದು ತಿಳಿದುಕೊಂಡೆ. ಇದರ ಹಿಂದೆ ಇನ್ನೇನೋ ಇದೆ’ ಎಂದು ಶೃತಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಶೃತಿ-ಸರ್ಜಾ ಪ್ರಕರಣದಲ್ಲಿ ನ.28 ರವರೆಗೆ ಅರ್ಜುನ್ ಸರ್ಜಾರನ್ನು ಬಂಧಿಸದಂತೆ ಹೈಕೋರ್ಟ್ ಆದೇಶಿಸಿದೆ. ಈ ನಡುವೆ ನಟಿ ಶೃತಿ ಅರ್ಜುನ್ ಸರ್ಜಾ ವಿರುದ್ಧ ಮಹಿಳಾ ಆಯೋಗಕ್ಕೆ ಭೇಟಿ ನೀಡಿ ತಮ್ಮ ಆರೋಪಗಳಿಗೆ ಪುರಾವೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಲಿವನ್ ಟೈಮ್ಸ್ ಫ್ರೆಶ್ ಫೇಸ್: ದಿವಾಸ್ ಕೌಶಿಕ್ ಹಾಗೂ ಸುಕನ್ಯಾ ಗಿರೀಶ್‌ ಮುಡಿಗೇರಿದ ಪ್ರಶಸ್ತಿ