Publish Date: Sat, 10 Nov 2018 (13:50 IST)
Updated Date: Sat, 10 Nov 2018 (13:56 IST)
ಬೆಂಗಳೂರು : ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗಕ್ಕೆ ಸರಿಯಾದ ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ ಮಹಿಳಾ ಆಯೋಗ ಇದೀಗ ಶೃತಿ ಹರಿಹರನ್ ವಿರುದ್ಧ ಗರಂ ಆಗಿದೆ.
ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮೀಟೂ ಪ್ರಕರಣದ ಬಗ್ಗೆ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ನಟಿ ಶೃತಿಗೆ ಪ್ರಕರಣದ ಕುರಿತು ಹೇಳಿಕೆ ನೀಡುವಂತೆ ಸೂಚಿಸಿದ್ದರು. ಆದರೆ ಶೃತಿ ಹರಿಹರನ್ ಆಯೋಗದ ಯಾವುದೇ ಫೋನ್ ಕರೆ, ಮೆಸೆಜ್ಗೆ ಸರಿಯಾಗಿ ಪ್ರತಿಕ್ರಿಯೆ ನೀಡದ ಕಾರಣ ಮಹಿಳಾ ಆಯೋಗ ಗರಂ ಆಗಿದೆ.
ಇದೀಗ ಇದಕ್ಕೆ ಸಂಬಂಧಪಟ್ಟ ಮಹಿಳಾ ಆಯೋಗದ ಸಂದೇಶ ನೋಡಿ ಕಂಗಾಲಾದ ನಟಿ ಶೃತಿ, ಆಯೋಗದ ಮುಂದೆ ಕ್ಷಮೆಯಾಚಿಸಿ ಸೋಮವಾರ ಹಾಜರಾಗುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.