Select Your Language

Notifications

webdunia
webdunia
webdunia
webdunia

ಇಂದಿನ ದಿನ ಭವಿಷ್ಯ

ಇಂದಿನ ದಿನ ಭವಿಷ್ಯ
ಬೆಂಗಳೂರು , ಶನಿವಾರ, 10 ನವೆಂಬರ್ 2018 (09:52 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು. ಏನು ಮಾಡಬಾರದು? ಯಾವ ಯಾವ ರಾಶಿಯವರಿಗೆ ಏನೇನು ಫಲ ಎಂಬುದನ್ನು ತಿಳಿದುಕೊಳ್ಳಿ.


ಮೇಷ ರಾಶಿ :  ನಗು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರವಾದ್ದರಿಂದ ನಕ್ಕುಬಿಡಿ. ಇತರರ ಮೇಲೆ ಪ್ರಭಾವ ಬೀರಲು ತುಂಬಾ ವೆಚ್ಚ ಮಾಡಬೇಡಿ. ಸ್ನೇಹಿತರೊಂದಿಗಿನ ಸಂಜೆ ಆನಂದ ಹಾಗೂ ಕೆಲವು ರಜಾ ಯೋಜನೆಗಳಿಗೆ ಉತ್ತಮವಾಗಿರುತ್ತದೆ. ಅನಿರೀಕ್ಷಿತ ಪ್ರಣಯ ಪ್ರಸಂಗಗಳು ಇಂದು ಎದುರಾಗಬಹುದು

 
ವೃಷಭ ರಾಶಿ : ನಿಮ್ಮನ್ನು ಪ್ರೇರೇಪಿಸುವ ಭಾವನೆಗಳನ್ನು ಗುರುತಿಸಿ. ನೀವು ಭಯ, ಅನುಮಾನ, ಕೋಪ, ದುರಾಸೆಯಂಥ ನಕಾರಾತ್ಮಕ ಆಲೋಚನೆಗಳನ್ನು ಬಿಡಬೇಕು. ಏಕೆಂದರೆ ಇವುಗಳು ನೀವು ಬಯಸುವುದಕ್ಕೆ ವಿರುದ್ಧವಾದವುಗಳನ್ನು ಆಕರ್ಷಿಸಲು ಆಯಸ್ಕಾಂತದಂತೆ ಕೆಲಸ ಮಾಡುತ್ತದೆ.

 
ಮಿಥುನ ರಾಶಿ : ನಿಮ್ಮ ನಗು ಖಿನ್ನತೆಯ ವಿರುದ್ಧ ಕೆಲಸ ಮಾಡುತ್ತದೆ. ಗಡಿಬಿಡಯ ನಿರ್ಧಾರಗಳನ್ನು ಕೈಗೊಳ್ಳಬೇಡಿ - ವಿಶೇಷವಾಗಿ ಪ್ರಮುಖ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾತನಾಡುವಾಗ. ನಿಮ್ಮ ಮನಸ್ಸಿನಲ್ಲಿ ಒತ್ತಡವಿದ್ದಲ್ಲಿ - ನಿಮ್ಮ ಸಂಬಂಧಿಕರು ಅಥವಾ ಆಪ್ತ ಸ್ನೇಹಿತರೊಡನೆ ಮಾತನಾಡಿ -ಇದು ನಿಮ್ಮ ತಲೆಯ ಹೊರೆಯನ್ನು ಕಡಿಮೆ ಮಾಡುತ್ತದೆ.

 
ಕರ್ಕ ರಾಶಿ : ನಿಮ್ಮ ಹಠಮಾರಿ ಧೋರಣೆ ಕೇವಲ ಸಮಯ ವ್ಯರ್ಥವಾದದ್ದರಿಂದ ಆದನ್ನು ನಿಮ್ಮ ಸಂತೋಷದ ಜೀವನದ ಸಲುವಾಗಿ ತೊರೆದುಬಿಡಿ. ಇಂದು ಮಾಡಿದ ಹೂಡಿಕೆ ನಿಮ್ಮ ಅಭ್ಯುದಯ ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ

 
ಸಿಂಹ ರಾಶಿ :  ಮೂಲಗಳು ಕಂಡುಬರುತ್ತವೆ. ಇಂದು ನೀವು ಸ್ವಲ್ಪ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ - ಆದರೆ ವಾಸ್ತವವಾದಿಗಳಾಗಿರಿ ಮತ್ತು ಸಹಾಯ ಮಾಡುವವರಿಂದ ಪವಾಡಗಳನ್ನು ನಿರೀಕ್ಷಿಸಬೇಡಿ



ಕನ್ಯಾ ರಾಶಿ : ಧೂಮಪಾನ ತ್ಯಜಿಸುವುದು ನೀವು ದೈಹಿಕವಾಗಿ ಆರೋಗ್ಯವಾಗಿ ಉಳಿಯಲು ಸಹಾಯ ಮಾಡುತ್ತದೆ. ದೀರ್ಘ ಕಾಲ ಬಾಕಿಯಿದ್ದ ಬಾಕಿಗಳು ಕೊನೆಗೂ ದೊರಕುತ್ತವೆ. ಇತರರಿಗೆ ನಿಮ್ಮ ಸಮಯ ನೀಡಲು ಒಳ್ಳೆಯ ದಿನ.



ತುಲಾ ರಾಶಿ : ಒಂದು ಲಾಭಕರ ದಿನ ಮತ್ತು ನೀವು ಧೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗಬಹುದು. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ನಿಮ್ಮ ಕುಟುಂಬದ ಕಲ್ಯಾಣಕ್ಕಾಗಿ ಕೆಲಸ ಮಾಡಿ



ವೃಶ್ಚಿಕ ರಾಶಿ : ನಿಮ್ಮ ಮಾನಸಿಕ ಒತ್ತಡವನ್ನು ಹೊಡೆದೋಡಿಸಲು ಆಧ್ಯಾತ್ಮಿಕತೆ ಒಂದು ಅತ್ಯುತ್ತಮ ಆಯ್ಕೆಯಾಗಿರುವುದರಿಂದ ನೀವು ಅದರ ಸಹಾಯ ಪಡೆಯಲು ಈಗ ಒಳ್ಳೆಯ ಸಮಯ. ಧ್ಯಾನ ಮತ್ತು ಯೋಗ ನಿಮ್ಮ ಮಾನಸಿಕ ದೃಢತೆಯನ್ನು ವರ್ಧಿಸುತ್ತವೆ.


ಧನು ರಾಶಿ : ನಿಮ್ಮ ಅಹಾರ ಕ್ರಮದ ಬಗ್ಗೆ, ವಿಶೇಷವಾಗಿ ಮೈಗ್ರೇನ್ ರೋಗಿಗಳು ಸೂಕ್ತ ಎಚ್ಚರ ತೆಗೆದುಕೊಳ್ಳಬೇಕು. ಅವರು ತಮ್ಮ ಊಟ ತಪ್ಪಿಸಿಕೊಂಡಲ್ಲಿ ಅದು ಅವರಿಗೆ ಅನಗತ್ಯ ಭಾವನಾತ್ಮಕ ಒತ್ತಡವನ್ನು ಉಂಟುಮಾಡಬಹುದು. ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ - ಆದರೆ ವೆಚ್ಚಗಳಲ್ಲಿ ನಿಮಗೆ ಉಳಿಸಲು ಕಷ್ಟವಾಗಿಸುತ್ತದೆ

 
ಮಕರ ರಾಶಿ : ನಿಮ್ಮ ಕಾಯಿಲೆ ಅತೃಪ್ತಿಯ ಕಾರಣವಾಗಿಬಹುದು. ಕುಟುಂಬದಲ್ಲಿ ಸಂತೋಷವನ್ನು ಪುನಃಸ್ಥಾಪಿಸಲು ನೀವು ಸಾಧ್ಯವಾದಷ್ಟೂ ಬೇಗ ಇದರಿಂದ ಹೊರಬರುವ ಅಗತ್ಯವಿದೆ. ಎಲ್ಲಾ ಬದ್ಧತೆಗಳು ಮತ್ತು ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು.  



ಕುಂಭ ರಾಶಿ : ತುಂಬಾ ಉತ್ಸಾಹ ಮತ್ತು ಸ್ಫೋಟಕ ಭಾವೋದ್ರೇಕಗಳು ನಿಮ್ಮ ನರಮಂಡಲಕ್ಕೆ ಹಾನಿ ಮಾಡಬಹುದು. ಇದನ್ನು ತಪ್ಪಿಸಲು ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ನಿಮ್ಮ ಸ್ನೇಹಿತರ ಸಹಾಯದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾಗುತ್ತವೆ

 
ಮೀನ ರಾಶಿ : ಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ಹೆಚ್ಚು ಖರೀದಿಸಲು ಧಾವಿಸುವ ಮೊದಲು ನೀವು ಈಗಾಗಲೇ ಹೊಂದಿರುವುದನ್ನು ಬಳಸಿ. ಅಂಚೆಯ ಮೂಲಕ ಬರುವ ಒಂದು ಪ್ರಮುಖ ಸಂದೇಶ ಇಡೀ ಕುಟುಂಬಕ್ಕೆ ಸಂತೋಷ ತರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಸುಖ-ಶಾಂತಿ ನೆಲೆಸಿರಲು ಶುಕ್ರವಾರ ತಪ್ಪದೇ ಮಾಡಿ ಈ ಕೆಲಸ