Publish Date: Fri, 09 Nov 2018 (08:50 IST)
Updated Date: Fri, 09 Nov 2018 (08:52 IST)
ಮುಂಬೈ: ವಿಚಿತ್ರ ಜೀವಿಯೊಂದರ ದಾಳಿಗೆ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ 12 ಮಂದಿ ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಮೂಡಿದೆ.
ದಾಪೊಡಿ ಎಂಬ ಗ್ರಾಮದಲ್ಲಿ ಪ್ರಾಣಿಯೊಂದರ ದಾಳಿಗೆ ಜನ ಸಾವನ್ನಪ್ಪಿದ್ದು, ಇದು ಚಿರತೆ ಎಂದು ಕೆಲವರು ಹೇಳುತ್ತಿದ್ದರೆ ಇನ್ನು ಕೆಲವರು ತೋಳವಿರಬಹುದು ಎಂದು ಊಹಿಸುತ್ತಿದ್ದಾರೆ.
ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಈ ಪ್ರಾಣಿಯನ್ನು ಸೆರೆ ಹಿಡಿಯಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇದು ಯಾವ ಪ್ರಾಣಿ ಎಂದು ಇದುವರೆಗೆ ಸ್ಪಷ್ಟವಾಗದ ಕಾರಣ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.