Publish Date: Fri, 09 Nov 2018 (08:46 IST)
Updated Date: Fri, 09 Nov 2018 (08:48 IST)
ಬೀಜಿಂಗ್: ಕೆಲಸ ಪೂರ್ತಿ ಮಾಡದ ನೌಕರರನ್ನು ಏನು ಮಾಡಬಹುದು? ಹೆಚ್ಚೆಂದರೆ ನಮ್ಮಲ್ಲಿ ಕೆಲಸದಿಂದ ಕಿತ್ತು ಹಾಕಬಹುದು. ಆದರೆ ಚೀನಾದಲ್ಲಿ ಕಂಪನಿಯೊಂದು ಮಾಡಿದ ಕೆಲಸ ನೋಡಿದರೆ ಬೆಚ್ಚಿ ಬೀಳುವಿರಿ.
ಹೇಳಿದ ದಿನದೊಳಗೆ ಕೆಲಸ ಪೂರ್ತಿ ಮಾಡದ ನೌಕರರಿಗೆ ಕಂಪನಿಯೊಂದು ಮೂತ್ರ ಕುಡಿಯುವ, ಜಿರಳೆ ತಿನ್ನುವ, ತಲೆ ಕೂದಲು ಬೋಳಿಸಿಕೊಳ್ಳುವ ಅಮಾನವೀಯ ಶಿಕ್ಷೆ ವಿಧಿಸಿದೆ. ಇದರ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲವು ನೌಕರರು ತಾವಾಗಿಯೇ ಕೆಲಸಕ್ಕೆ ಗುಡ್ ಬೈ ಹೇಳುತ್ತಿದ್ದಾರಂತೆ.
ಇದು ಚೀನಾದಲ್ಲಿ ನೌಕರರ ಪರಿಸ್ಥಿತಿಗೆ ಹಿಡಿದ ಕೈ ಗನ್ನಡಿಯಂತಿದೆ. ಇಲ್ಲಿ ಕಾರ್ಮಿಕರನ್ನು ತುಚ್ಛವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬ ಮಾತಿಗೆ ಈ ದೃಶ್ಯಗಳೇ ಸಾಕ್ಷಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.