ಮದುವೆಯಾಗೆಂದು ಒತ್ತಾಯಿಸುತ್ತಿದ್ದ ಪೋಷಕರ ಬಾಯಿ ಮುಚ್ಚಿಸಲು ಈಕೆ ಮಾಡಿದ್ದೇನು ಗೊತ್ತಾ?!

ಭಾನುವಾರ, 28 ಅಕ್ಟೋಬರ್ 2018 (09:18 IST)
ನವದೆಹಲಿ: ಬೆಳೆದ ಮಗಳು ಇನ್ನೂ ಮದುವೆಯಾಗಿಲ್ಲ ಎಂದರೆ ಅಪ್ಪ ಅಮ್ಮನಿಗೆ ಚಿಂತೆ ಕಾಡುವುದು ಸಹಜ. ಆದರೆ ಇಲ್ಲೊಬ್ಬ ಮಹಿಳೆ ಪೋಷಕರ ಮದುವೆಯಾಗು ಎಂಬ ಒತ್ತಾಯ ತಡೆಯಲಾರದೆ ಏನು ಮಾಡಿದಳು ಗೊತ್ತೇ?

32 ವರ್ಷದ ಲುಲು ಜೆಮಿಮಾ ಎಂಬಾಕೆ ಆಕ್ಸ್ ಫರ್ಡ್ ವಿವಿಯ ವಿದ್ಯಾರ್ಥಿನಿ. ಈಕೆಗೆ ಮದುವೆಯಾಗುವುದು ಸುತರಾಂ ಇಷ್ಟವಿಲ್ಲ. ಆದರೆ ಪೋಷಕರು ಬಿಡಬೇಕಲ್ಲ? ಒತ್ತಾಯ ಮಾಡುತ್ತಲೇ ಇದ್ದರು. ಚಿಕ್ಕಂದಿನಿಂದಲೇ ಇವಳ ಮದುವೆ ಬಗ್ಗೆ ಸಾಕಷ್ಟು ಕನಸು ಕಂಡಿದ್ದರಂತೆ.

ಆದರೆ ಅತ್ತ ಮನದಿಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಲಾಗದೆ ಇತ್ತ ಪೋಷಕರಿಗೂ ನಿರಾಸೆ ಮಾಡಲಾಗದೆ ಲುಲು ಮದುವೆಯಂತೂ ಆದಳು! ಆದರೆ ವರನೇ ಇಲ್ಲದೇ ತನ್ನನ್ನು ತಾನೇ ಮದುವೆಯಾದಳು! ಮದುವಣಗಿತ್ತಿಯಂತೆ ಅಲಂಕರಿಸಿಕೊಂಡು ತಾನೇ ಮದುವೆಯಾಗಿ ಹೆತ್ತವರ ಆಸೆ ಪೂರೈಸಿದಳು. ಅಷ್ಟೇ ಅಲ್ಲ, ನನ್ನನ್ನು ಅತ್ಯಂತ ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವ ನನ್ನನ್ನು ನಾನು ಮದುವೆಯಾದೆ ಎಂದು ಹೇಳಿಕೊಂಡಿದ್ದಾಳೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರಧಾನಿ ಮೋದಿಯನ್ನು ಹೀಗೆ ಕರೆದು ಅವಮಾನ ಮಾಡಿದ ಕಾಂಗ್ರೆಸ್ ಶಾಸಕಿ