Publish Date: Sat, 27 Oct 2018 (20:05 IST)
Updated Date: Sat, 27 Oct 2018 (20:07 IST)
ಗಂಡು ಶಿಶುವನ್ನು ಐದು ಸಾವಿರ ಹಣ ನೀಡಿ ಖರೀದಿ ಮಾಡಿದ್ದ ಮಹಿಳೆಯೊಬ್ಬಳು ಇದೀಗ ಪೊಲೀಸರ ಅತಿಥಿಯಾದ ಘಟನೆ ಬಿಸಿಲೂರಿನಲ್ಲಿ ನಡೆದಿದೆ.
ಕಲಬುರಗಿ ನಗರದಲ್ಲಿ ನವಜಾತ ಗಂಡು ಶಿಶು ಖರೀದಿಸಿದ ಮಹಿಳೆಯೊಬ್ಬಳನ್ನು ಬಂಧಿಸಿರುವ ಪೊಲೀಸರು, ಶಿಶುವನ್ನು ಪುನಃ ತಾಯಿಗೆ ಒಪ್ಪಿಸಿರುವ ಪ್ರಕರಣ ನಡೆದಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ರಜೀಯಾಬೇಗಂ ಎಂಬ ಮಹಿಳೆ ಕೆಲವು ದಿನಗಳ ಹಿಂದೆ ಕಲಬುರಗಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಮಗುವನ್ನು ಕಲಬುರಗಿಯ ನಿವಾಸಿ ರಹಿಮುನ್ನಿಸಾ ಶೇಖ್ ಜಾಹೀರ್ ಎಂಬ ಮಹಿಳೆ ಐದು ಸಾವಿರ ಹಣ ಕೊಟ್ಟು ಖರೀದಿ ಮಾಡಿದ್ದಳು.
ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಕಾರ್ಯಾಚರಣೆ ನಡೆಸಿ ಮಗುವನ್ನು ಪುನಃ ತಾಯಿಯ ಮಡಿಲಿಗೆ ಒಪ್ಪಿಸಿದ್ದು, ಹಣ ಕೊಟ್ಟು ಖರೀದಿ ಮಾಡಿದ್ದ ಮಹಿಳೆಯನ್ನು ಬಂಧಿಸಿದ್ದಾರೆ.