ಮಕ್ಕಳಿಗೆ ಬರೀ ಕೇಕ್, ಕೋಲಾ ಕುಡಿಸಿದ ತಪ್ಪಿಗೆ ಜೈಲಿಗೆ ಹೋದ ಅಪ್ಪ!

ಶುಕ್ರವಾರ, 26 ಅಕ್ಟೋಬರ್ 2018 (08:59 IST)
ನವದೆಹಲಿ: ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದು ಅಪ್ಪನ ಕರ್ತವ್ಯ. ಆದರೆ ಫ್ರಾನ್ಸ್ ನಲ್ಲಿ ತಂದೆಯೊಬ್ಬ ತನ್ನಿಬ್ಬರು ಮಕ್ಕಳಿಗೆ ಬರೀ ಕೇಕ್ ಮತ್ತು ಕೋಕೋ ಕೋಲಾ ಕುಡಿಸಿ ಜೈಲಿಗೆ ಹೋಗುವ ಪರಿಸ್ಥಿತಿ ಬಂದಿದೆ.

ಹೆಂಡತಿ ಜತೆ ಜಗಳವಾಡಿಕೊಂಡು ಬೇರಾಗಿದ್ದ ತಂದೆ ಇಬ್ಬರು ಗಂಡು ಮಕ್ಕಳನ್ನು ತಾನೇ ನೋಡಿಕೊಳ್ಳುತ್ತಿದ್ದ. ಆದರೆ ಈತ ಮಹಾನ್ ಕುಡುಕ. ಮನೆಯಲ್ಲಿ ಮಕ್ಕಳಿಗೆ ಬೇಕಾದ ಮೂಲಭೂತ ಸೌಕರ್ಯವನ್ನೂ ಒದಗಿಸಿಕೊಟ್ಟಿರಲಿಲ್ಲ.

ಆತನ ಮನೆಯಲ್ಲಿ ಮಕ್ಕಳಿಗೆ ತಿನ್ನಲು ಬೇಕಾದ ಪ್ರಾಥಮಿಕ ಆಹಾರಗಳೂ ಇರಲಿಲ್ಲ. ಬದಲಾಗಿ ಹಸಿವಾದಾಗ ಕೇಕ್, ಕೋಲಾ ಕುಡಿಸುತ್ತಿದ್ದ. ಇದೀಗ ಇಂತಹ ಆಹಾರವನ್ನೇ ಸೇವಿಸಿ ಮಕ್ಕಳ ಹಲ್ಲುಗಳು ಉದುರುವ ಹಂತಕ್ಕೆ ಬಂದಿದ್ದು, ಒಬ್ಬನಿಗೆ ಮಾತಾಡಲೂ ಸರಿಯಾಗಿ ಬರುತ್ತಿಲ್ಲ. ಇದೀಗ ಇಬ್ಬರನ್ನೂ ಮಕ್ಕಳ ಯೋಗ ಕ್ಷೇಮ ಕೇಂದ್ರಕ್ಕೆ ಸೇರಿಸಲಾಗಿದೆ. ತಂದೆ ಮಾಡಿದ ತಪ್ಪಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕರಾವಳಿ ಜನ ಯಾಕಾದ್ರೂ ಬಿಜೆಪಿಗೆ ವೋಟು ಕೊಟ್ಟರೋ: ಸಿದ್ದರಾಮಯ್ಯ