Select Your Language

Notifications

webdunia
webdunia
webdunia
webdunia

ನಕಲಿ ನೋಟು ಕೊಟ್ಟು 2 ಲಕ್ಷ ರೂ. ಆಭರಣ ಎಗರಿಸಿದ ದಂಪತಿ

ನಕಲಿ ನೋಟು ಕೊಟ್ಟು 2 ಲಕ್ಷ ರೂ. ಆಭರಣ ಎಗರಿಸಿದ ದಂಪತಿ
ಲುಥಿಯಾನ , ಗುರುವಾರ, 25 ಅಕ್ಟೋಬರ್ 2018 (10:14 IST)
ಲುಥಿಯಾನ: 2 ಲಕ್ಷ ರೂ. ಮೊತ್ತದ ನಕಲಿ ನೋಟು ಕೊಟ್ಟು ದಂಪತಿ ಜ್ಯುವೆಲ್ಲರಿ ಮಾಲಿಕನಿಗೆ ಮೋಸ ಮಾಡಿ ಆಭರಣ ಖರೀದಿಸಿದ ಘಟನೆ ನಡೆದಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆಯುವ ಜಾಗದಲ್ಲಿ ಎಂಟರ್ ಟೈನ್ ಮೆಂಟ್ ‍ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆದಿದ್ದ 500 ರೂ.ಗಳ 2 ಲಕ್ಷ ಮೌಲ್ಯದ ನೋಟು ನೀಡಿದ ದಂಪತಿ ಸುಮಾರು 1,90,000 ರೂ. ಮೌಲ್ಯದ 56 ಗ್ರಾಂ ಚಿನ್ನಾಭರಣ ಖರೀದಿ ಮಾಡಿದ್ದರು.

ದಂಪತಿ ಅಂಗಡಿಯಿಂದ ತೆರಳಿದ ಮೇಲಷ್ಟೇ ಮಾಲಿಕ ನೋಟನ್ನು ಪರಿಶೀಲಿಸಿದ್ದಾನೆ. ಪೊಲೀಸರು ಇದೀಗ ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲಿಸಿ ದಂಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

100 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ 20ರ ಯುವಕ