ಶೂಟಿಂಗ್ ಗಾಗಿ ತೆರಳುತ್ತಿದ್ದ ಪುನೀತ್ ರಾಜ್ ಕುಮಾರ್ ಮಾರ್ಗಮಧ್ಯದಲ್ಲಿ ಅತ್ತಿಗುಂಡಿ ಗ್ರಾಮಕ್ಕೆ ಹೋಗಿದ್ಯಾಕೆ ಗೊತ್ತಾ?

ಶುಕ್ರವಾರ, 9 ನವೆಂಬರ್ 2018 (09:16 IST)
ಬೆಂಗಳೂರು : ಶೂಟಿಂಗ್ ಗಾಗಿ ತೆರಳುತ್ತಿದ್ದ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ಮಾರ್ಗಮಧ್ಯದಲ್ಲಿ ಬಂದ ಅತ್ತಿಗುಂಡಿ ಗ್ರಾಮದಲ್ಲಿ ಇಳಿದು ಇಡೀ ಗ್ರಾಮವನ್ನು ಸುತ್ತಿದ್ದಾರಂತೆ.


ಪುನೀತ್ ಅವರು ಈರೀತಿ ಮಾಡಲು ಕಾರಣವೇನು? ಅವರಿಗೂ ಆ ಗ್ರಾಮಕ್ಕೂ ಏನು ನಂಟು? ಎಂಬ ಪ್ರಶ್ನೆ ಹಲವರಲ್ಲಿ ಮೂಡಿರಬಹುದು. ಇದಕ್ಕೆ ಕಾರಣ ಇಲ್ಲಿದೆ ನೋಡಿ. ಪುನೀತ್ ಬಾಲನಟನಾಗಿ ನಟಿಸಿದ 1985ರಲ್ಲಿ ಬಿಡುಗಡೆಗೊಂಡ ನ್ಯಾಷನಲ್ ಅವಾರ್ಡ್ ಪಡೆದ ‘ಬೆಟ್ಟದ ಹೂ’  ಚಿತ್ರದ ಶೂಟಿಂಗ್ ನಡೆದಿದ್ದು ಚಿಕ್ಕಮಗಳೂರಿನ ಅತ್ತಿಗುಂಡಿ ಎನ್ನುವ ಈ ಪುಟ್ಟ ಗ್ರಾಮದಲ್ಲಿ.
ಆದಕಾರಣ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿಲು ಕಾರಿನಿಂದ ಕೆಳಗಿಳಿದು ಪುಟ್ಟ ಮಕ್ಕಳಂತೆ ಇಡೀ ಗ್ರಾಮದಲ್ಲಿ ಸುತ್ತಾಡಿ, ತಾವು ಶೂಟಿಂಗ್ ನಡೆದ ಸ್ಥಳಗಳನ್ನು ನೋಡಿ , ಆ ಗ್ರಾಮದ ಜನರ ಜತೆ ಮಾತನಾಡಿ, ಕಳೆದು ಹೋದ ಸುಂದರ ನೆನಪುಗಳನ್ನು ನೆನೆದು ಸಂತಸ ಪಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೆಜಿಎಫ್ ಚಿತ್ರ ತುಳಿಯಲು ಸಾಥ್ ನೀಡುವವರಿಗೆ ತಕ್ಕ ಉತ್ತರ ಕೊಟ್ಟ ನಟ ಜಗ್ಗೇಶ್