ರಜನೀಕಾಂತ್ ನಟಿಸಿದ ‘ಕಾಲಾ’ ಚಿತ್ರದಂತೆ ‘2.0’ ಸಿನಿಮಾಕ್ಕೂ ಕರ್ನಾಟಕದಲ್ಲಿ ಸಂಕಷ್ಟ

ಗುರುವಾರ, 8 ನವೆಂಬರ್ 2018 (07:00 IST)
ಬೆಂಗಳೂರು : ತಮಿಳು ಚಿತ್ರರಂಗದ  ಸೂಪರ್ ಸ್ಟಾರ್ ರಜನೀಕಾಂತ್ ನಟಿಸಿದ 2.0 ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಕನ್ನಡ ಪರ ಸಂಘಟನೆಗಳ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.


ಈ ಹಿಂದೆ ಕಾವೇರಿ ನದಿ ನೀರು ಹಂಚಿಕೆಯ ಬಗ್ಗೆ ತಮಿಳುನಾಡಿನ ಪರವಾಗಿ ಮಾತನಾಡಿದ್ದಕ್ಕೆ ರಜನೀಕಾಂತ್ ಅವರ ‘ಕಾಲಾ’ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗದಂತೆ ತಡೆದಿದ್ದರು. ಆದರೆ ಇದೀಗ 2.0 ಸಿನಿಮಾ ಕೂಡ ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು. ಒಂದು ವೇಳೆ ಬಿಡುಗಡೆ ಆದರೆ ತೀವ್ರ ಹೋರಾಟ ಮಾಡುತ್ತೇನೆ ಎಂದು ವಾಟಾಳ್ ಎಚ್ಚರಿಕೆ ನೀಡಿದ್ದಾರೆ.


ಈ ಬಗ್ಗೆ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಅವರು, ಕನ್ನಡದ ಪರಿಸ್ಥಿತಿ ಕರ್ನಾಟಕದಲ್ಲಿ ಶೋಚನೀಯವಾಗಿದೆ. ತಮಿಳಿನ ಹಾವಳಿ ಹೆಚ್ಚಾಗಿದೆ. ಕನ್ನಡ ಚಿತ್ರಗಳಿಗೆ ಚಿತ್ರ ಮಂದಿರಗಳು ಸಿಗುತ್ತಿಲ್ಲ. ರಜನಿಕಾಂತ್ 2.0 ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗುವುದನ್ನು ಖಂಡಿಸುತ್ತೇನೆ. ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರಿಗೂ ಕನ್ನಡದ ಬಗ್ಗೆ, ಕಾವೇರಿ ಬಗ್ಗೆ ಮಾತನಾಡುವುದೆ ಕೆಲಸವಾಗಿ ಹೋಗಿದೆ. ಅವರು ತಮಿಳುನಾಡಿನಲ್ಲಿ ಬಂಗಲೆ ಕಟ್ಟಿಸಿಕೊಂಡು ಬೆಚ್ಚಗಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ಸಿನಿಮಾ ಬಿಡುಗಡೆಯಾಗುವುದಕ್ಕೆ ಭಯ ಬೀಳುವ ಪರಿಸ್ಥಿತಿ ಎದುರಾಗಿದೆ. ನಮ್ಮ ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಮೊದಲ ಆಧ್ಯತೆ ನೀಡಬೇಕು. ಮೊದಲು ಕನ್ನಡ ಚಲನಚಿತ್ರಗಳಿಗೆ ಪ್ರಾಮುಖ್ಯತೆ ನೀಡಬೇಕು’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಟ ಕಮಲ್ ಹಾಸನ್ ಗೆ ಇಂದು 64 ನೇ ಹುಟ್ಟುಹಬ್ಬದ ಸಂಭ್ರಮ