ದೀಪಾವಳಿ ಹಬ್ಬದ ಉಡುಗೊರೆಯಾಗಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಐಡಿಯಾ

ಬುಧವಾರ, 7 ನವೆಂಬರ್ 2018 (15:24 IST)
ಬೆಂಗಳೂರು : ಐಡಿಯಾ ಮತ್ತು ವೋಡಾಫೋನ್ ವಿಲೀನದ ನಂತರ ಗ್ರಾಹಕರಿಗೆ ಉತ್ತಮ ಆಫರ್ ಗಳನ್ನು ನೀಡುತ್ತಿದ್ದು, ಇದೀಗ ಜೀಯೋ ಟಕ್ಕರ್ ನೀಡಲು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಐಡಿಯಾ159 ರೂ.  ಹೊಸ ಆಫರ್ ಅನ್ನು ಪರಿಚಯಿಸಿದೆ.


ರೂ. 159 ಪ್ಲಾನ್ ಅಡಿಯಲ್ಲಿ ಪ್ರತಿ ದಿನ ಒಂದು ಜಿಬಿ ಡೇಟಾ ಪಡೆಯಲಿದ್ದಾರೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯ ಇರಲಿದೆ. ಐಡಿಯಾ ಹೊಸ ಪ್ಲಾನ್ ನಲ್ಲಿ ಒಟ್ಟು 28 ಜಿಬಿ ಡೇಟಾ ಹಾಗು 100 ಎಸ್‌ಎಂಎಸ್ ಇರಲಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ. ಪ್ರತಿ ದಿನ ಗ್ರಾಹಕರು 250 ನಿಮಿಷ ಮಾತ್ರ ಉಚಿತವಾಗಿ ಮಾತನಾಡಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜನಾರ್ಧನ ರೆಡ್ಡಿ ತಂಗಿದ್ದ ಮನೆಯಲ್ಲೂ ತಪಾಸಣೆ