ವಿನೋದ್ ರಾಜ್ ಕಾರಿನಲ್ಲಿದ್ದ 1ಲಕ್ಷ ರೂ. ದರೋಡೆ ಮಾಡಿದ ಖತರ್ನಾಕ್ ಕಳ್ಳ ಅರೆಸ್ಟ್

ಶುಕ್ರವಾರ, 9 ನವೆಂಬರ್ 2018 (12:41 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ವಿನೋದ್ ರಾಜ್ ಅವರ  ಕಾರಿನಲ್ಲಿದ್ದ 1ಲಕ್ಷ ರೂ. ದರೋಡೆ ಮಾಡಿದ ಖತರ್ನಾಕ್ ಕಳ್ಳನೊರ್ವನನ್ನು ಪೊಲೀಸರು ಬಂಧಿಸಿದ್ದಾರೆ.


ಕಳೆದ ತಿಂಗಳು ಖತರ್ನಾಕ್ ಓಜಿಕುಪ್ಪಂ ಗ್ಯಾಂಗ್‍ ನವರು ಅಭಿಮಾನಿ ಎಂದು ಯಾಮಾರಿಸಿ  ನಟ, ವಿನೋದ್ ರಾಜ್‍ರನ್ನು ಕಾರಿನಲ್ಲಿ ಮಾತನಾಡಿಸುತ್ತಲೇ ಕಾರು ಪಂಚರ್ ಮಾಡಿ ಕಾರಿನಲ್ಲಿದ್ದ 1 ಲಕ್ಷ ಹಣವನ್ನ ಖದೀಮರು ಕದ್ದು ಎಸ್ಕೇಪ್ ಆಗಿದ್ದರು.
ಈ ಪ್ರಕರಣದ ಕಾರ್ಯಚರಣೆ ನಡೆಸಿದ ನೆಲಮಂಗಲ ಪೊಲೀಸರು ಇದೀಗ ಓಜಿಕುಪ್ಪಂ ಗ್ಯಾಂಗ್‍ ನ  ರಾಜು ಎಂಬಾತನನ್ನು ಬಂಧಿಸಿದ್ದು, ಉಳಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರ ಕಾರ್ಯಕ್ಕೆ ನಟ ವಿನೋದ್ ರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ‘ಸರ್ಕಾರ್’ ಸಿನಿಮಾದಲ್ಲಿ ಜಯಲಲಿತಾಗೆ ಅವಮಾನ; ಚಿತ್ರ ಪ್ರದರ್ಶನ ತಡೆಹಿಡಿದ ಜಯಾ ಬೆಂಬಲಿಗರು