Select Your Language

Notifications

webdunia
webdunia
webdunia
webdunia

ಲಿವನ್ ಟೈಮ್ಸ್ ಫ್ರೆಶ್ ಫೇಸ್: ದಿವಾಸ್ ಕೌಶಿಕ್ ಹಾಗೂ ಸುಕನ್ಯಾ ಗಿರೀಶ್‌ ಮುಡಿಗೇರಿದ ಪ್ರಶಸ್ತಿ

ಲಿವನ್ ಟೈಮ್ಸ್ ಫ್ರೆಶ್ ಫೇಸ್: ದಿವಾಸ್ ಕೌಶಿಕ್ ಹಾಗೂ ಸುಕನ್ಯಾ ಗಿರೀಶ್‌ ಮುಡಿಗೇರಿದ ಪ್ರಶಸ್ತಿ
ಬೆಂಗಳೂರು , ಬುಧವಾರ, 14 ನವೆಂಬರ್ 2018 (17:54 IST)
ಬೆಂಗಳೂರು: ಲಿವನ್ ಟೈಮ್ಸ್ ಫ್ರೆಶ್ ಫೇಸ್ ಬೆಂಗಳೂರಿನ ಯುವ ಪ್ರತಿಭೆಗಳಿಗೆ ಅವರ ವ್ಯಕ್ತಿತ್ವ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಯಿತು.
ಬೆಂಗಳೂರಿನ 20 ಕಾಲೇಜು ಹಾಗೂ 1 ಓಪನ್ ಮಾಲ್ ನಲ್ಲಿ ನಡೆಸಿದ ಈ ಪ್ರತಿಭಾನ್ವಷಣೆಯ ಆಡಿಷನ್ ನಲ್ಲಿ  ಕಠಿಣ ಆಯ್ಕೆಯ ಮೂಲಕ 150 ಸೆಮಿಫೈನಲಿಸ್ಟ್  ಗಳನ್ನು ಆಯ್ಕೆ ಮಾಡಲಾಯಿತು. ಇದರಲ್ಲಿ ಟಾಪ್ 20 ಅನ್ನು ಸಿಟಿ ಫಿನಾಲೆಗಾಗಿ ಆಯ್ಕೆ ಮಾಡಲಾಯಿತು. ಇದರಲ್ಲಿ ದಿವಾಸ್ ಕೌಶಿಕ್ ಹಾಗೂ ಸುಕಾನ್ಯ ಗಿರೀಶ್ ವಿಜೇತರಾದರು.
 
ಲೈಂಗಿಕ ದುರ್ಬಳಕೆ ಹಾಗೂ ದಾಳಿಗೆ ಸಂಬಂಧಪಟ್ಟಂತೆ ದಿವಾಸ್ ಕೌಶಿಕ್ ಅವರ ಅದ್ಭುತವಾದ ರ್ಯಾಂಪ್ ಅಭಿನಯ ತೀರ್ಪುಗಾರರ ಮನಸೆಳೆಯಿತು. ಹಾಗೇ ಸುಕನ್ಯಾ ಗಿರೀಶ್ ಅವರು ತಮ್ಮ ಪ್ರತಿಭೆಯಿಂದ ತೀರ್ಪುಗಾರರು ಹಾಗೂ ಪ್ರೇಕ್ಷಕರ ಗಮನ ಸೆಳೆದರು. ಸ್ಪರ್ಧಿಗಳ ಪ್ರತಿಭೆ ಹಾಗೂ ಅವರು ತಮ್ಮನ್ನು ತಾವು ಹೇಗೆ ಪ್ರಸ್ತುತಪಡಿಸಿಕೊಂಡರು ಹಾಗೇ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅವರ ಅಭಿಪ್ರಾಯ ಎಂಬಿತ್ಯಾದಿ ವಿಷಯಗಳ ಆಧಾರದ ಮೇಲೆ ತೀರ್ಪುಗಾರರು ಅವರನ್ನು ಆಯ್ಕೆ ಮಾಡಿದರು. ನಟಿ ಶೃತಿ ಹರಿಹರನ್ ತೀರ್ಪುಗಾರರಾಗಿ ಭಾಗವಹಿಸಿದ್ದರು.
webdunia
ಇನ್ನು ಈ ಕಾರ್ಯಕ್ರಮದ ಕುರಿತು ಮಾತನಾಡಿದ ನಟಿ ಶೃತಿ ಹರಿಹರನ್ ‘ಬೆಂಗಳೂರು ಫ್ರೆಶ್ ಫೇಸ್ ಫಿನಾಲೆಯ 11ನೇ ಆವೃತ್ತಿಯಲ್ಲಿ ಭಾಗಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಇದರಲ್ಲಿ ಭಾಗವಹಿಸಿದ ಆ ಮಕ್ಕಳು ಹಾಗೂ ಯುವಕರು ಪ್ರತಿಭಾವಂತರು. ಇವರ ಕೈಯಲ್ಲಿ ನಮ್ಮ ದೇಶದ ಭವಿಷ್ಯವು ಸುರಕ್ಷಿತವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ.  ಹಾಗೇ ಇದರಲ್ಲಿ ಭಾಗವಹಿಸಿದವರಿಗೂ ಹಾಗೂ ವಿಜೇತರಿಗೂ ನನ್ನ ಅಭಿನಂದನೆಗಳು. ಈ ವೇದಿಕೆಯನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ಕಲಿಯಲು ಇದೊಂದು ಅವರಿಗೆ ಉತ್ತಮವಾದ ಅವಕಾಶ. ನಾನು ಎಲ್ಲರಿಗೂ ಶುಭ ಹಾರೈಕೆಗಳು ಎಂದು ಶೃತಿ ಹರಿಹರನ್ ಹೇಳಿದರು.
webdunia
 ಇಲ್ಲಿ ಸ್ಪರ್ಧಿಗಳನ್ನು ಅವರ ವ್ಯಕ್ತಿತ್ವ, ಪ್ರತಿಭೆ, ಜ್ಞಾನ ಹಾಗೂ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅವರ ಅರಿವುಗಳ ಆಧಾರದ ಮೇಲೆ ನಿರ್ಣಯ ಮಾಡಲಾಯಿತು. ಆಯ್ಕೆಯಾದ ಪ್ರತಿ ನಗರದ ಫೈನಲಿಸ್ಟ್ ಗಳು ಮುಂಬೈಯಲ್ಲಿ ನಡೆಯಲಿರುವ ನ್ಯಾಷನಲ್ ಗ್ರಾಂಡ್ ಫಿನಾಲೆಯಲ್ಲಿ  ಸ್ಪರ್ಧಿಸಲಿದ್ದಾರೆ. ಇಲ್ಲಿ ವಿಜೇತರಾದ ಒಬ್ಬ ಹುಡುಗ ಹಾಗೂ ಒಬ್ಬ ಹುಡುಗಿ ಲಿವನ್ ಟೈಮ್ಸ್ ಫ್ರೆಶ್ ಫೇಸ್ನ11ನೇ ಆವೃತ್ತಿಯ ಕಿರೀಟವನ್ನು ತಮ್ಮು ಮುಡಿಗೇರಿಸಿಕೊಳ್ಳಲಿದ್ದಾರೆ.
 
 ಹಾಗೇ ಯಾರು ಈ ಆಡಿಷನ್ ಅನ್ನು ಮಿಸ್ ಮಾಡಿಕೊಂಡಿದ್ದಾರೋ ಅವರು ನೇರವಾಗಿ ಮುಂಬೈನಲ್ಲಿ ನಡೆಯಲಿರುವ ಲಿವನ್ ಟೈಮ್ಸ್ ಫ್ರೆಶ್ ಫೇಸ್  ಸೀಸನ್ 11ರ ರಾಷ್ಟ್ರೀಯ ಫಿನಾಲೆಗೆ ಹೋಗಬಹುದು.
webdunia
 ಲಿವನ್ ಮಿಸ್ ಫ್ಯಾಬ್ ಹಾಗೂ ಸೆಟ್ ವೆಟ್ ಪ್ರಾಯೋಜಕತ್ವದ ವೈಲ್ಡ್ ಕಾರ್ಡ್ ಪ್ರವೇಶದಿಂದ ನ್ಯಾಷನಲ್ ವಿನ್ನರ್ ಆಗುವ ಅವಕಾಶವನ್ನು ನೀಡಲಿದೆ. www.timesfreshface/wildcard ನಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳಬೇಕು.
 
ಟೈಮ್ಸ್ ಫ್ರೆಶ್ ಫೇಸ್ ವಿಶ್ವದಾದ್ಯಂತ ಇರುವ ಪ್ರತಿಭೆಗಳನ್ನು ಒಟ್ಟಿಗೆ ತಂದು ಅವರ ಪ್ರತಿಭೆ ಹಾಗೂ ವ್ಯಕ್ತಿತ್ವವನ್ನು  ಪ್ರದರ್ಶಿಸಲು ಒಂದು ವೇದಿಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತನುಶ್ರೀ ಮೇಲೆ ಮತ್ತೆ ಆರೋಪ ಮಾಡಿದ ನಟಿ ರಾಖಿ ಸಾವಂತ್