Publish Date: Wed, 14 Nov 2018 (09:42 IST)
Updated Date: Wed, 14 Nov 2018 (09:43 IST)
ಲಕ್ನೋ: ಪತ್ನಿಯ ಮೇಲೆ ಸಿಟ್ಟಿಗೆ ಇಲ್ಲೊಬ್ಬ ವ್ಯಕ್ತಿ ತನ್ನ ಮೂವರು ಮಕ್ಕಳ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಉತ್ತರ ಪ್ರದೇಶದ ಲಲಿತ್ ಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಪತ್ನಿ ತನ್ನ ಉಳಿದಿಬ್ಬರು ಮಕ್ಕಳೊಂದಿಗೆ ತವರಿಗೆ ಹೋದ ಸಿಟ್ಟಿನಲ್ಲಿ ಪತಿ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಸಮೀಪದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಇದೀಗ ಆರೋಪಿಯನ್ನು ಜೈಲಿಗಟ್ಟಲಾಗಿದೆ. ಮದ್ಯಪಾನ ಮಾಡಿದ್ದ ಮತ್ತಿನಲ್ಲಿ ಆರೋಪಿ ಪತ್ನಿಯ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಅದೇ ಸಿಟ್ಟಿನಲ್ಲಿ ಪತ್ನ ಮಧ್ಯಪ್ರದೇಶದಲ್ಲಿರುವ ತನ್ನ ತವರು ಮನೆಗೆ ಇಬ್ಬರು ಮಕ್ಕಳೊಂದಿಗೆ ತೆರಳಿದ್ದಳು. ಆಕೆ ಮರಳಿ ಬಾರದ ಸಿಟ್ಟಿನಲ್ಲಿ ಪತಿ ಈ ನೀಚ ಕೃತ್ಯವೆಸಗಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.