Select Your Language

Notifications

webdunia
webdunia
webdunia
webdunia

ನಿಮ್ಮ ದೇಹದಲ್ಲಿ ಈ ಬದಲಾವಣೆ ಆಗುತ್ತಿದ್ದರೆ ಹುಷಾರಾಗಿ!

ನಿಮ್ಮ ದೇಹದಲ್ಲಿ ಈ ಬದಲಾವಣೆ ಆಗುತ್ತಿದ್ದರೆ ಹುಷಾರಾಗಿ!
ಬೆಂಗಳೂರು , ಗುರುವಾರ, 15 ನವೆಂಬರ್ 2018 (09:17 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಳವಾಗುವುದು ಒಂದು ಅಪಾಯಕಾರಿ ಆರೋಗ್ಯ ಸಮಸ್ಯೆಯಾಗಿ ಕಾಡುತ್ತಿದೆ. ಹಾಗಿದ್ದರೆ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಳವಾಗಿದೆ ಎಂದು ಪತ್ತೆಹಚ್ಚುವುದು ಹೇಗೆ? ಅದರ ಲಕ್ಷಣಗಳು ಹೀಗಿವೆ ನೋಡಿ.
 

ಸುಸ್ತು
ಸ್ವಲ್ಪ ನಡೆದರೂ, ಓಡಾಡಿದರೂ ವಿಪರೀತ ಸುಸ್ತಾಗುವುದು, ಉಸಿರು ಕಟ್ಟಿದಂತಾಗುವುದು ಸಮಸ್ಯೆ ಕಂಡುಬರುತ್ತಿದ್ದರೆ ಅದು ಕೊಲೆಸ್ಟ್ರಾಲ್ ಹೆಚ್ಚಳವಾಗಿರುವುದರ ಲಕ್ಷಣವಾಗಿರಬಹುದು.

ಕಾಲು ನೋವು
ವಿನಾಕಾರಣ ಕಾಲು ನೋವು ಬರುತ್ತಿದ್ದರೆ ಅಲಕ್ಷಿಸಬೇಡಿ. ಇದೂ ಕೂಡಾ ಕೊಲೆಸ್ಟ್ರಾಲ್ ಹೆಚ್ಚಳದ ಲಕ್ಷಣವೇ.

ಬೆವರು
ಬೆವರುವುದು ಸಾಮಾನ್ಯವೇ. ಆದರೆ ಅಸಹಜವಾಗಿ ಬೆವರುತ್ತಿದ್ದರೆ ಕೊಲೆಸ್ಟ್ರಾಲ್ ಹೆಚ್ಚಳವಾಗಿರುವುದರಿಂದಲೂ ಇರಬಹುದು.

ಎದೆನೋವು
ಎದೆ ನೋವು ಬಂದಾಗಲೆಲ್ಲಾ ಹೃದಯದ ತೊಂದರೆ ಇರಬಹುದು ಎಂದು ಭಯಪಡುತ್ತೇವೆ. ಕೊಲೆಸ್ಟ್ರಾಲ್ ಹೆಚ್ಚಳದಿಂದಲೂ ಎದೆನೋವು ಬರಬಹುದು. ಇಂತಹ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷಿಸದೇ ತಕ್ಷಣ ವೈದ್ಯರನ್ನು ಕಾಣಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಮಿಲನ ಕ್ರಿಯೆ ಬಳಿಕ ಈ ಕೆಲಸ ತಪ್ಪದೇ ಮಾಡಬೇಕು!