Publish Date: Sat, 14 Jan 2023 (07:27 IST)
Updated Date: Sat, 14 Jan 2023 (08:16 IST)
ನವದೆಹಲಿ : ಸ್ಪೈಸ್ ಜೆಟ್ ವಿಮಾನಕ್ಕೆ ಗುರುವಾರ ಬಾಂಬ್ ಕರೆ ನೀಡಿದ್ದ ಬ್ರಿಟಿಷ್ ಏರ್ವೇಸ್ನ ಟ್ರೈನಿ ಟಿಕೆಟ್ ಏಜೆಂಟ್ನನ್ನು ಶುಕ್ರವಾರ ಅಧಿಕಾರಿಗಳು ಬಂಧಿಸಿದ್ದಾರೆ.
ಗುರುವಾರ ಸಂಜೆ ದೆಹಲಿಯಿಂದ ಪುಣೆಗೆ ಹೋಗಬೇಕಿದ್ದ ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಈ ಹಿನ್ನೆಲೆ ಅಧಿಕಾರಿಗಳು ತೀವ್ರವಾಗಿ ಶೋಧ ನಡೆಸಿದ್ದರು.
ಆದರೆ ವಿಮಾನದಲ್ಲಿ ಅಂತಹ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗದ ಇನ್ನೆಲೆ ಇದನ್ನು ಹುಸಿ ಬಾಂಬ್ ಕರೆ ಎಂದು ಘೋಷಿಸಲಾಯಿತು.