Publish Date: Sun, 15 Jan 2023 (07:02 IST)
Updated Date: Sun, 15 Jan 2023 (09:45 IST)
ಬೆಂಗಳೂರು : ದಕ್ಷಿಣಕಾಶಿ ಎಂದು ನಾನಾ ಪವಾಡಗಳಿಗೆ ಸಾಕ್ಷಿಯಾಗಿರುವ ಪ್ರಸಿದ್ಧ ಪುಣ್ಯಕ್ಷೇತ್ರ ನೆಲಮಂಗಲದ ಶಿವಗಂಗೆ ಬೆಟ್ಟಕ್ಕೆ ಈ ಬಾರಿ ಸಂಕ್ರಾಂತಿ ಹಬ್ಬಕ್ಕೆ ಜನರ ಪ್ರವೇಶ ನಿಷೇಧಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವಿಶ್ವ ಪ್ರಸಿದ್ಧ ಶಿವಗಂಗೆ ಬೆಟ್ಟವನ್ನು ಏರಲು ಜನವರಿ 14 ಹಾಗೂ 15 ರಂದು ನಿರ್ಬಂಧಿಸಲಾಗಿದೆ.
ಇತ್ತೀಚೆಗೆ ಹೊಸ ವರ್ಷದ ದಿನ ಭಕ್ತರೊಬ್ಬರು ಬೆಟ್ಟ ಏರಿ ನೂಕುನುಗ್ಗಲಿದ್ದರಿಂದ ಬಿದ್ದು ಸಾವನಪ್ಪಿರುವ ಹಿನ್ನೆಲೆ ಹಾಗೂ ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಆದೇಶ ಪ್ರಕಟಿಸಿದೆ.