ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಮ್ಮ ವಿಮಾನ ನಿಲ್ದಾಣ ನಮ್ಮ ಹೆಮ್ಮೆ ಅನ್ನೋ ಹಾಗೆ ಸದಾ ಸಾಧನೆಯ ಹಾದಿಯಲ್ಲಿ ಸಾಗುತ್ತಿದೆ.
ಉದ್ಯಾನನಗರಿ ಬೆಂಗಳೂರಿನ ಖ್ಯಾತಿಗೆ ಪ್ರತೀಕವೆಂಬಂತೆ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ಮಾದರಿಯ ಹಚ್ಚ ಹಸಿರಿನ ಪರಿಸರ ಸ್ನೇಹಿ ಟರ್ಮಿನಲ್-2 ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿದೆ.
ಹೌದು, ಕಳೆದ ವರ್ಷ ನವೆಂಬರ್ 11 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿದ್ದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಇದೀಗ ಕಾರ್ಯಾರಂಭ ಮಾಡಲು ಸಕಲ ಸನ್ನದ್ಧವಾಗಿದೆ.
ಉದ್ಯಾನನಗರಿ ಬೆಂಗಳೂರಿನ ಪ್ರತೀಕವೆಂಬಂತೆ ತಲೆ ಎತ್ತಿರುವ ಪರಿಸರ ಸ್ನೇಹಿ ಟರ್ಮಿನಲ್-2 ಇದೇ ಜನವರಿ 15 ಸಂಕ್ರಾಂತಿ ಹಬ್ಬದ ನಂತರ ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿದೆ.