Select Your Language

Notifications

webdunia
webdunia
webdunia
webdunia

ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ‌ ಅಗ್ನಿ ಅವಘಡ

ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ‌ ಅಗ್ನಿ ಅವಘಡ
bangalore , ಮಂಗಳವಾರ, 18 ಅಕ್ಟೋಬರ್ 2022 (14:28 IST)
ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಬೆಳ್ಳಂಬೆಳಿಗ್ಗೆ ಅಗ್ನಿ ಅವಘಡ  ಲಸಂಭವಿಸಿದೆ.ಅವಘಡದಲ್ಲಿ ಠಾಣೆಗೆ ಹಾನಿಯಾಗಿದೆ.ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.ಸದ್ಯ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕದಳ ಯಶಸ್ವಿಯಾಗಿದೆ.
 
ಈ ವೇಳೆ ಮಾತನಾಡಿದ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ವಿಲ್ಸನ್ ಗಾರ್ಡನ್ ಠಾಣೆಯ ಬಲಭಾಗದಲ್ಲಿದ್ದ ಕೊಠಡಿಯಲ್ಲಿ‌ ಅವಘಡ ಸಂಭವಿಸಿದೆ.ಹಳೆಯ ಕಡತಗಳು, ಜಪ್ತಿಯಾದ ಕೆಲ ವಸ್ತುಗಳನ್ನ ಇರಿಸಲಾಗಿತ್ತು.ಅದೇ ಕೊಠಡಿಯಲ್ಲಿ ಯುಪಿಎಸ್ ಇಡಲಾಗಿತ್ತು.ಬೆಳಿಗ್ಗೆ 5:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.ಅಗ್ನಿಶಾಮಕದಳದವರು‌ ಬೆಂಕಿ ಆರಿಸಿದ್ದಾರೆ.ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟಿನಿಂದ ಅವಘಡ ಸಂಭವಿಸಿದಂತಿದೆ .ಘಟನೆಯ ಕುರಿತು ವರದಿ ನೀಡುವಂತೆ ಎಸಿಪಿಯವರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಲಾಲ್ ವಿರುದ್ಧ ಅಭಿಯಾನಕ್ಕೆ ಬೆದರಿದ್ರಾ ಮೆಕ್ ಡೊನಾಲ್ಡ್ಸ್ ...?