Select Your Language

Notifications

webdunia
webdunia
webdunia
webdunia

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನೂತನ ಗೈಡ್ ಲೈನ್

New guide line at Kempegowda Airport
bangalore , ಶನಿವಾರ, 31 ಡಿಸೆಂಬರ್ 2022 (20:17 IST)
ಕೋವಿಡ್ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮವನ್ನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತೆಗೆದುಕೊಳ್ಳಲಾಗಿದ್ದು, ಜನವರಿ 1 ರಿಂದ ಪರಿಷ್ಕೃತ ನೂತನ ಮಾರ್ಗಸೂಚಿ ಏರ್ ಪೋರ್ಟ್​ನಲ್ಲಿ ಜಾರಿಗೆ ಬರಲಿದೆ. ಕೋವಿಡ್ ಉಲ್ಬಣಗೊಂಡಿರುವ ದೇಶಗಳಾದ ಚೀನಾ, ಸಿಂಗಾಪುರ, ಹಾಂಕಾಂಗ್, ರಿಪಬ್ಲಿಕ್ ಆಫ್ ಕೊರಿಯಾ, ಥೈಲ್ಯಾಂಡ್ ಮತ್ತು ಜಪಾನ್ ನಿಂದ ಭಾರತಕ್ಕೆ ಪ್ರಯಾಣಿಕರು ಕಡ್ಡಾಯವಾಗಿ ಆರ್ ಟಿ - ಪಿಸಿಆರ್ ಟೆಸ್ಟ್ ಮಾಡಿಸಿರಬೇಕು, ಏರ್ ಸುವಿಧಾ ಆಪ್ ನಲ್ಲಿ ಆರ್ ಟಿ -ಪಿಸಿಆರ್ ಟೆಸ್ಟ್ ನಲ್ಲಿ ಬಂದ ನೆಗೆಟಿವ್ ಕೋವಿಡ್ -19 ವರದಿಯನ್ನ ಆಪ್ ಲೋಡ್ ಮಾಡಬೇಕಿದೆ, 72 ಗಂಟೆಯೊಳಗಿನ ವರದಿಗೆ ಮಾತ್ರ ಮಾನ್ಯತೆ ನೀಡಲಾಗಿದೆ.
ವಿಮಾನ ನಿಲ್ದಾಣಕ್ಕೆ ಬಂದ ವಿದೇಶಿ ಪ್ರಯಾಣಿಕರನ್ನ ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಲಾಗುತ್ತದೆ. ವಿದೇಶದಿಂದ ಬಂದ ಶೇಕಡಾ 2 ರಷ್ಟು ಪ್ರಯಾಣಿಕರನ್ನ ರ್ಯಾಂಡಮ್ ಟೆಸ್ಟ್ ಗೆ ಒಳಪಡಿಸಲಾಗುವುದು, ಪ್ರಯಾಣಿಕರ ಗಂಟಲು ದ್ರವ ತೆಗೆದುಕೊಂಡು ಲ್ಯಾಬ್ ವರದಿಗಾಗಿ ಕಳುಹಿಸಲಾಗುವುದು, ರೋಗ ಲಕ್ಷಣ ಇರುವ ಪ್ರಯಾಣಿಕರನ್ನ ತಕ್ಷಣವೇ ಪ್ರತ್ಯೇಕವಾಗಿ ಇಡುವ ವ್ಯವಸ್ಥೆ ಮಾಡಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ರ್ಯಾಂಡಮ್ ಟೆಸ್ಟ್ ನಲ್ಲಿ ವಿನಾಯಿತಿ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಮ್ ಮಾಲೀಕರೊಬ್ಬರನ್ನ ಹತ್ಯೆ ಮಾಡಿ ಎಸ್ಕೇಪ್