Publish Date: Sat, 14 Jan 2023 (14:02 IST)
Updated Date: Sat, 14 Jan 2023 (14:45 IST)
ವಾಷಿಂಗ್ಟನ್ : ವಿಮಾನ ನಿರ್ವಹಣಾ ಸಾಫ್ಟ್ವೇರ್ನ ತಾಂತ್ರಿಕ ಸಮಸ್ಯೆಯಿಂದಾಗಿ ಅಮೆರಿಕದಾದ್ಯಂತ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.
ತಾಂತ್ರಿಕ ದೋಷ ಬಹುತೇಕ ವಿಮಾನಗಳ ಮೇಲೆ ಪರಿಣಾಮ ಬಿದ್ದಿದ್ದು, ಅವುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ತಾಂತ್ರಿಕ ಸಮಸ್ಯೆ ಕಂಡುಬರುತ್ತಲೇ ಅಮೆರಿಕದಲ್ಲಿ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಬುಧವಾರ ಸ್ಥಳೀಯ ಕಾಲಮಾನ ಮುಂಜಾನೆ 6:30ರ ವೇಳೆಗೆ ಸುಮಾರು 760 ವಿಮಾನಗಳು ವಿಳಂಬವಾಗಿದೆ ಎಂದು ತಿಳಿದುಬಂದಿದೆ.