Select Your Language

Notifications

webdunia
webdunia
webdunia
webdunia

ಸುನಾಮಿ : ವಿಮಾನ ಸಂಚಾರ ರದ್ದು!

ಸುನಾಮಿ : ವಿಮಾನ ಸಂಚಾರ ರದ್ದು!
ವಾಷಿಂಗ್ಟನ್ , ಮಂಗಳವಾರ, 27 ಡಿಸೆಂಬರ್ 2022 (08:40 IST)
ಅಮೆರಿಕಾದಲ್ಲಿ ಹಿಮ ಸುನಾಮಿ ಭೀಭತ್ಸ ಸೃಷ್ಟಿಸಿದೆ. ತೀವ್ರ ಶೀತಗಾಳಿಗೆ ಉಷ್ಣಾಂಶ ದೊಡ್ಡ ಪ್ರಮಾಣದಲ್ಲಿ ಬಿದ್ದುಹೋಗ್ತಿದೆ. ಮೈನಸ್ 50 ಡಿಗ್ರಿವರೆಗೂ ತಾಪಮಾನ ಕುಸಿದಿದೆ.

ಕುಡಿಯುವ ನೀರಿಗೂ ಜನ ಪರದಾಡುವಂತಾಗಿದೆ. 15 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸರಬರಾಜು ಬಂದ್ ಆಗಿದ್ದು, ಜನ ಕತ್ತಲಲ್ಲಿ ಕೊಳೆಯುವಂತಾಗಿದೆ.

ಅಂದಾಜು 20 ಕೋಟಿ ಮಂದಿ ಸಂತ್ರಸ್ತರಾಗಿದ್ದಾರೆ. ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಕಳೆದ ಮೂರ್ನಾಲ್ಕು ದಿನಗಳಿಂದ ಸುಮಾರು 15 ಸಾವಿರ ವಿಮಾನ ಸಂಚಾರ ರದ್ದಾಗಿದೆ. 

ಅಮೆರಿಕ-ಕೆನಡಾ ಮಧ್ಯೆ ಆರ್ಕಟಿಕ್ ಬ್ಲಾಸ್ಟ್ ಹೋಗಿ ಬಾಂಬ್ ಸೈಕ್ಲೋನ್ ಆಗಿದೆ. ಅಮೆರಿಕ-ಕೆನಡಾ ನಡುವೆ ಹಿಮರಾಶಿ ಹರಡುತ್ತಲೇ ಇದೆ. ಟೆಕ್ಸಾಸ್ನಿಂದ ಕ್ಯೂಬೆಕ್ವರೆಗೆ ಸುಮಾರು 3,200 ಕಿ.ಮೀ.ವರೆಗೆ ಹಿಮ ಆವರಿಸಿದೆ.

ನ್ಯೂಯಾರ್ಕ್, ಬಫೆಲೋ ಮಿಚಿಗನ್, ಒರ್ಲಾಂಡೋ, ಡೆನ್ವರ್, ದಲ್ಲಾಸ್, ನಾಶ್ವಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಹೆದ್ದಾರಿಗಳಲ್ಲಿ ದಾರಿ ಕಾಣದೆ ಸರಣಿ ಅಪಘಾತಗಳಾಗಿವೆ. ಎಲ್ಲೆಂದರಲ್ಲೇ ಜನ, ವಾಹನಗಳು ಫ್ರೀಜ್ ಆಗುತ್ತಿದ್ದಾರೆ. ಭಾರೀ ಪ್ರಮಾಣದಲ್ಲಿ ಹಿಮ ಸುರಿಯುತ್ತಿರುವ ಕಾರಣ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾ : ಕೊರೊನಾ ದೈನಂದಿನ ಪ್ರಕರಣಗಳ ಸಂಖ್ಯೆ ಪ್ರಕಟಿಸದಿರಲು ನಿರ್ಧಾರ?