ನವದೆಹಲಿ: ಈ ಬಾರಿ ಈದ್ ಹಬ್ಬ ಆಚರಣೆಗೆ ಬಡ ಮುಸ್ಲಿಂ ಕುಟುಂಬಕ್ಕೆ ಮೋದಿ ಗಿಫ್ಟ್ ಪ್ಯಾಕೆಟ್ ನೀಡಿದ್ದಾರೆ. ಇದರ ಹಿಂದೆ ಬೇರೆಯೇ ಲೆಕ್ಕಾಚಾರವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಡ ಮುಸ್ಲಿಂ ಕುಟುಂಬಕ್ಕೆ ಈದ್ ಹಬ್ಬ ಆಚರಿಸಲು ಬೇಕಾದ ಒಣ ಹಣ್ಣು, ದಿನಸಿ ಸಾಮಗ್ರಿಗಳನ್ನು ಒಳಗೊಂಡ ಸೌಗತ್ ಇ ಮೋದಿ ಗಿಫ್ಟ್ ಪ್ಯಾಕೆಟ್ ನ್ನು ವಿತರಿಸಲಾಗುತ್ತಿದೆ. ಇದ್ದಕ್ಕಿದ್ದಂತೆ ಮೋದಿ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಗಿಫ್ಟ್ ನೀಡಲು ಮುಂದಾಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಆದರೆ ಗಿಫ್ಟ್ ಹಿಂದೆ ಬೇರೆಯದೇ ಲೆಕ್ಕಾಚಾರವಿದೆ ಎನ್ನಲಾಗುತ್ತಿದೆ. ಇನ್ನೇನು ವಕ್ಫ್ ಬಿಲ್ ಮಂಡನೆಯಾಗಲಿದೆ. ಇದರ ವಿರುದ್ಧ ಮುಸ್ಲಿಂ ಸಮುದಾಯ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಇದು ಬಿಜೆಪಿ ಮುಸ್ಲಿಂ ವಿರೋಧಿ ಎಂದು ಬಿಂಬಿಸಿದಂತಾಗುತ್ತದೆ.
ಇದನ್ನು ತಡೆಯುವ ಉದ್ದೇಶದಿಂದ ಮತ್ತು ವಕ್ಫ್ ತಿದ್ದುಪಡಿ ಬಿಲ್ ಗೆ ಮುಸ್ಲಿಂ ಸಮುದಾಯದವರ ಬೆಂಬಲ ಪಡೆಯುವ ಉದ್ದೇಶದಿಂದ ಮೋದಿ ಸರ್ಕಾರ ಈಗ ಮುಸ್ಲಿಮರಿಗೆ ಈದ್ ಗಿಫ್ಟ್ ನೀಡಲು ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇದನ್ನೇ ಕಾಂಗ್ರೆಸ್ ಲೇವಡಿ ಮಾಡಿದ್ದು, ಬಿಜೆಪಿಯೂ ಮುಸ್ಲಿಮರ ಓಲೈಕೆಯಲ್ಲಿ ತೊಡಗಿದೆ ಎಂದಿದೆ.