Select Your Language

Notifications

webdunia
webdunia
webdunia
webdunia

ವಕ್ಫ್ ಆಸ್ತಿ ಮಾತ್ರ ಯಾಕೆ, ಹಿಂದೂ ದೇವಾಲಯಗಳ ಹಣ, ಚಿನ್ನ ಬಡವರಿಗೆ ಹಂಚಬೇಕು: ಮೌಲಾನಾ ಹೇಳಿಕೆ

Shia cleric

Krishnaveni K

ನವದೆಹಲಿ , ಬುಧವಾರ, 12 ಮಾರ್ಚ್ 2025 (09:42 IST)
Photo Credit: X
ನವದೆಹಲಿ: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ವಿರುದ್ಧ ಸಿಡಿದೆದ್ದಿರುವ ಮುಸ್ಲಿಂ ಧರ್ಮಗುರು ಮೌಲಾನಾ ಸೈಯದ್ ಕಾಲ್ಬೆ ಜಾವೇದ್ ವಕ್ಫ್ ಮಾತ್ರ ಯಾಕೆ, ಹಿಂದೂ ದೇವಾಲಯಗಳ ಹಣ, ಚಿನ್ನವನ್ನೂ ಬಡವರಿಗೆ ಹಂಚಬೇಕು ಎಂದಿದ್ದಾರೆ.

ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಬಿಲ್ ತಂದು ಹಿಂದೂ-ಮುಸ್ಲಿಂ ನಡುವೆ ಧ್ವೇಷ ಬಿತ್ತುತ್ತಿದೆ. ಮುಸ್ಲಿಮರಿಗೆ ನೋವು ನೀಡಿ ಹಿಂದೂಗಳನ್ನು ಸಂತೋಷಪಡಿಸಲು ಸರ್ಕಾರ ಯತ್ನಿಸುತ್ತಿದೆ. ಆದರೆ ಎರಡೂ ಧರ್ಮಗಳ ನಡುವೆ ಬಿರುಕು ಮೂಡಿಸಲು ನಿಮಗೆ ಸಾಧ್ಯವಿಲ್ಲ ಎಂದಿದ್ದಾರೆ.

‘ವಕ್ಫ್ ಆಸ್ತಿ ಎನ್ನುವುದು ಜನರು ಬಡವರ ಉದ್ದಾರಕ್ಕೆ ದಾನವಾಗಿ ನೀಡಿದ ಆಸ್ತಿ. ಇದಕ್ಕೆ ವಕ್ಫ್ ಬೋರ್ಡ್ ಕೇವಲ ಕಾವಲುಗಾರ ಅಷ್ಟೇ ಮಾಲಿಕನಲ್ಲ. ಕೇಂದ್ರ ಸರ್ಕಾರವೂ ಜನರ ಕಾವಲುಗಾರ, ಯಜಮಾನನಲ್ಲ. ಹಾಗೆ ನೋಡಿದರೆ ಹಲವು ಹಿಂದೂ ದೇವಾಲಯಗಳಲ್ಲಿ ಟನ್ ಗಟ್ಟಲೆ ಚಿನ್ನ, ಹಣವಿದೆ. ಅದನ್ನೆಲ್ಲಾ ಬಡವರಿಗೆ ಹಂಚಲಿ. ಇದರಿಂದ ದೇಶದಲ್ಲಿ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 20 ರೂ.ಗೆ ಇಳಿಕೆಯಾಗಬಹುದು. ನೀವು ಯಾಕೆ ಹಿಂದೂ ದೇವಾಲಯಗಳ ಹಣವನ್ನು ಬಡವರಿಗೆ ಹಂಚಲ್ಲ?’ ಎಂದು ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ರಾಜ್ಯದಲ್ಲಿ ಇಂದು ಯಾವ ಜಿಲ್ಲೆಗಳಿಗೆ ಮಳೆಯ ಸೂಚನೆ ಇಲ್ಲಿದೆ ವಿವರ