Select Your Language

Notifications

webdunia
webdunia
webdunia
webdunia

Saugat E Modi: ದೇಶದ ಬಡ ಮುಸ್ಲಿಮರಿಗೆ ಮೋದಿ ಗಿಫ್ಟ್ ಕಿಟ್: ಏನಿರಲಿದೆ ಕಿಟ್ ನಲ್ಲಿ ಇಲ್ಲಿದೆ ವಿವರ

Narendra Modi

Krishnaveni K

ನವದೆಹಲಿ , ಮಂಗಳವಾರ, 25 ಮಾರ್ಚ್ 2025 (15:35 IST)
ನವದೆಹಲಿ: ಈದ್ ಹಬ್ಬದ ಸಮದರ್ಭದಲ್ಲಿ ದೇಶದ ಬಡ ಮುಸ್ಲಿಮರಿಗೆ ಪ್ರಧಾನಿ ಮೋದಿ ಸೌಗತ್ ಇ ಮೋದಿ ಗಿಫ್ಟ್ ಕಿಟ್ ನೀಡಲು ಮುಂದಾಗಿದ್ದಾರೆ.

ಬಡ ಮುಸ್ಲಿಂ ಕುಟುಂಬಗಳು ಈದ್ ಆಚರಿಸಲು ಸಹಾಯ ಮಾಡುವ ಉದ್ದೇಶದಿಂದ ಮೋದಿ ಸರ್ಕಾರ ಸೌಗತ್ ಇ ಮೋದಿ ಎಂಬ ಗಿಫ್ಟ್ ಕಿಟ್ ವಿತರಿಸಲಿದೆ. ಇದನ್ನು ಸ್ವತಃ ಬಿಜೆಪಿ ಘೋಷಣೆ ಮಾಡಿದೆ. ಈ ಗಿಫ್ಟ್ ಪ್ಯಾಕೆಟ್ ನಲ್ಲಿ ಈದ್ ಹಬ್ಬ ಆಚರಿಸಲು ಬೇಕಾದ ವಸ್ತುಗಳಿರಲಿದೆ.

ಬಡ ಮುಸ್ಲಿಮರೂ ಈದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಾಧ್ಯವಾಗುವಂತೆ ಮೋದಿ ಸರ್ಕಾರ ಈ ಗಿಫ್ಟ್ ನೀಡಲಿದೆ. ಇದರಲ್ಲಿ ಖರ್ಜೂರ, ಒಣ ಹಣ್ಣುಗಳು, ಕಡಲೆ ಹಿಟ್ಟು, ತುಪ್ಪ, ಡಾಲ್ಡಾ, ಮಹಿಳೆಯರಿಗೆ ಸೂಟ್ ಬಟ್ಟೆಗಳು ಇರಲಿದೆ. ಇದರ ಬಗ್ಗೆ ಇಂದಿನಿಂದಲೇ ಪ್ರಚಾರ ಆರಂಭಿಸಲು ಬಿಜೆಪಿ ಮುಂದಾಗಿದೆ.

ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ 100 ಜನರನ್ನು ಸಂಪರ್ಕಿಸುತ್ತಾರೆ. ಬಿಜೆಪಿ ಪ್ರಬಲವಾಗಿರುವ ರಾಜ್ಯದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಈ ಮೂಲಕ ಬಿಜೆಪಿಯೆಂದರೆ ಮುಸ್ಲಿಮರ ವಿರೋಧಿ ಎನ್ನುವ ಅಪವಾದವನ್ನೂ ತೊಡೆದು ಹಾಕುವ ಗುರಿ ಬಿಜೆಪಿಯದ್ದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಾ.ಅಂಬೇಡ್ಕರ್, ಸಂವಿಧಾನ ವಿರೋಧಿಸುವುದು ಕಾಂಗ್ರೆಸ್ಸಿನ ಡಿ.ಎನ್.ಎ: ಸಿ.ಟಿ.ರವಿ