Select Your Language

Notifications

webdunia
webdunia
webdunia
webdunia

ಬಿಜೆಪಿಯಲ್ಲಿನ ಆಂತರಿಕ ಕಿತ್ತಾಟದಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ: ಆರ್‌ ಅಶೋಕ್‌

BJP Party Leaders Fight, Opposition Leader R Ashok, BJP President BY Vijayendra,

Sampriya

ಬೆಂಗಳೂರು , ಶುಕ್ರವಾರ, 7 ಫೆಬ್ರವರಿ 2025 (16:30 IST)
ಬೆಂಗಳೂರು: ಬಿಜೆಪಿಯಲ್ಲಿನ  ಆಂತರಿಕ ಕಿತ್ತಾಟದಿಂದ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಈ ಎಲ್ಲಾ ಗೊಂದಲಗಳು 15-20 ದಿನಗಳಲ್ಲಿ ಪರಿಹಾರ ಆಗಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್  ತಿಳಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಹ ಉಸ್ತುವಾರಿ ಸುಧಾಕರ್ ರೆಡ್ಡಿಯವರ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಹೈಕಮಾಂಡ್ ಈಗಾಗಲೇ ಪಕ್ಷದ ವಿಚಾರವನ್ನ ನಾಲ್ಕು ಗೋಡೆ ಮಧ್ಯೆ ಮಾತನಾಡಬೇಕು ಎಂದು ಹೇಳಿದೆ. ನಮ್ಮ ಸಹ ಉಸ್ತುವಾರಿ ಸುಧಾಕರ್ ರೆಡ್ಡಿಯವರು ಕೂಡ ಇದೇ ಹೇಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ನಿತ್ಯ ಅಕ್ರಮದಲ್ಲಿ ತೊಡಗಿದೆ. ಲೂಟಿ, ಕಮಿಷನ್, ಮೈಕ್ರೋ ಫೈನಾನ್ಸ್ ಸಾವು, ಬಾಣಂತಿಯರ ಸಾವು ಪ್ರಕರಣದಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ನಾವು ಹೋರಾಟ ಮಾಡಬೇಕು.

ನಮ್ಮಲಿನ ಆಂತರಿಕ ಕಿತ್ತಾಟದಿಂದ ನಮಗೆ ಸ್ವಲ್ಪ ಅಡೆತಡೆ ಆಗಿದೆ. 15-20 ದಿನಗಳಲ್ಲಿ ಗೊಂದಲಗಳಿಗೆ ತೆರೆ ಬೀಳಲಿದ್ದು, ನಾರ್ಮಲ್ ಬಿಜೆಪಿ ರೀತಿ ಕೆಲಸ ಮುಂದುವರೆಸುತ್ತೇವೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆರ್ಥಿಕತೆ ಪುನಶ್ಚೇತನಕ್ಕೆ ಆರ್‌ಬಿಐ ದಿಟ್ಟ ಕ್ರಮ: ಐದು ವರ್ಷಗಳ ಬಳಿಕ ರೆಪೊ ದರ ಕಡಿತ