Select Your Language

Notifications

webdunia
webdunia
webdunia
webdunia

ಕಾಟಾಚಾರದ ಸಭೆಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ: ಸಿಎಂಗೆ ಆರ್‌ ಅಶೋಕ್‌ ಕ್ಲಾಸ್‌

Micro Finance Case, Chief Minister Siddaramaiah, Opposition Leader R Ashok

Sampriya

ಬೆಂಗಳೂರು , ಮಂಗಳವಾರ, 28 ಜನವರಿ 2025 (17:36 IST)
ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಬಡವರು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಮುಂದುವರೆಯುತ್ತಲೇ ಇದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲಿ ಕಳೆದ ಎರಡು ದಿನಗಳಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ತಮ್ಮ ಕಾಟಾಚಾರದ ಸಭೆಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ಕರೆದು ಈ ಕಿರುಕುಳ ನಿಲ್ಲಿಸುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ಕೊಡಿ. ಪೊಲೀಸ್ ಸಹಾಯವಾಣಿ ತೆರೆದು ವಸೂಲಿಗಾರರು ಮನೆ ಬಾಗಿಲಿಗೆ ಬಂದರೆ ಸಾರ್ವಜನಿಕರು
ಪೊಲೀಸರಿಗೆ ಕರೆ ಮಾಡಿ ತಿಳಿಸುವ ವ್ಯವಸ್ಥೆ ಮಾಡಿ.

ವಿವಿಧ ಅಭಿವೃದ್ಧಿ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡಿ ಇನ್ನು ಮುಂದಾದರೂ ಬಡವರು, ದಿನಗೂಲಿ ನೌಕರರು, ಕೃಷಿ ಕಾರ್ಮಿಕರು ಸಾಲಕ್ಕಾಗಿ ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ಅವಲಂಬಿಸದಂತೆ ಕ್ರಮ ಕೈಗೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

DeepSeek: ಅಮೆರಿಕಾಗೆ ಚಳಿ ಜ್ವರ ತಂದಿತ್ತ ಚೀನಾದ ಡೀಪ್ ಸೀಕ್ ಎಐ, ಭಾರತಕ್ಕೂ ಸವಾಲು: ಏನಿದು ಇಲ್ಲಿದೆ ಡೀಟೈಲ್ಸ್