Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯನವರೇ 5ವರ್ಷ ಸಿಎಂ, ಈ ಬಗ್ಗೆ ಚರ್ಚೆ ಅನವಶ್ಯಕ: ಜಮೀರ್ ಅಹ್ಮದ್

Karnataka Chief Minister Siddaramaiah, Minister Zameer Ahmed, Karnataka Chief Minister Post Fight

Sampriya

ಕೊಪ್ಪಳ , ಭಾನುವಾರ, 26 ಜನವರಿ 2025 (16:58 IST)
ಕೊಪ್ಪಳ: ಐದು ವರ್ಷವೂ ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿಗಳ ಕುರ್ಚಿ ಖಾಲಿಯಿಲ್ಲ. ಹಾಗಾಗಿ ಈ ಸಂಬಂಧ ಚರ್ಚೆ ಅನವಶ್ಯಕ. ಅದಲ್ಲದೆ ಕೆಪಿಸಿಸಿ ಅಧ್ಯಕ್ಷರ ಕುರ್ಚಿಯೂ  ಖಾಲಿಯಿಲ್ಲ. ಈ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ವೈಯಕ್ತಿಕ ಎಂದು ಹೇಳಿದರು.

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರ ಸ್ವಲ್ಪವೂ ಇಲ್ಲ. ಸಿದ್ದರಾಮಯ್ಯ ಅವರನ್ನು ಅಲುಗಾಡಿಸಿದರೆ ಕಾಂಗ್ರೆಸ್‌ಗೆ ತೊಂದರೆ ಆಗುತ್ತದೆ ಎಂದು ಬಿಜೆಪಿಗರು ಕಿರಿಕಿರಿ ಮಾಡುತ್ತಿದ್ದಾರೆ. ಇದೆಲ್ಲ ನಡೆಯುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ನಡುವಿನ ಜಗಳ ಬಿಜೆಪಿ ಆಂತರಿಕ ವಿಚಾರ. ಶ್ರೀರಾಮುಲು ಅವರನ್ನು ಕಾಂಗ್ರೆಸ್‌ಗೆ ಯಾರೂ ಆಹ್ವಾನಿಸಿಲ್ಲ. ಅಷ್ಟಕ್ಕೂ ಅವರು ಬರುವುದೂ ಇಲ್ಲ. ಇದೆಲ್ಲ ಅವರಿಬ್ಬರ ನಾಟಕ. ಬಿಜೆಪಿಯಲ್ಲಿ ಬೇಳೆ ಬೇಯಿಸಿಕೊಳ್ಳಲು, ಕಾಂಗ್ರೆಸ್‌ನಿಂದ ಆಹ್ವಾನ ಇದೆ ಎಂದು ಶ್ರೀರಾಮುಲು ಹೇಳಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು: ಥೈಲ್ಯಾಂಡ್ ಸುಂದರಿಯನ್ನು ಮುಂದಿಟ್ಟು ಹೈಟೆಕ್ ವೇಶ್ಯಾವಾಟಿಕೆ, 7ಜನ ವಶಕ್ಕೆ