Select Your Language

Notifications

webdunia
webdunia
webdunia
webdunia

ಮೈಸೂರು: ಥೈಲ್ಯಾಂಡ್ ಸುಂದರಿಯನ್ನು ಮುಂದಿಟ್ಟು ಹೈಟೆಕ್ ವೇಶ್ಯಾವಾಟಿಕೆ, 7ಜನ ವಶಕ್ಕೆ

Mysuru High Tech Prostitution, Thailand Beauty In Mysore, Mysore High Tech Prostitution

Sampriya

ಮೈಸೂರು , ಭಾನುವಾರ, 26 ಜನವರಿ 2025 (16:43 IST)
ಮೈಸೂರು: ಸರ್ಕಾರಿ ನೌಕರಿಯಲ್ಲಿದ್ದ ವ್ಯಕ್ತಿಯೊಬ್ಬ ಥೈಲ್ಯಾಂಡ್‌ನ ಸುಂದರಿಯನ್ನು ಮುಂದಿಟ್ಟು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲ ನಗರದಲ್ಲಿ ಪತ್ತೆಯಾಗಿದೆ.

ಮೈಸೂರಿನ ಹೋಟೆಲ್‌ವೊಂದರಲ್ಲಿ ವೇಶ್ಯೆವಾಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಕೆಎಸ್‌ಆರ್‌ಟಿಸಿ ನೌಕರ ರತನ್ ಥೈಲ್ಯಾಂಡ್ ಬ್ಯೂಟಿ ಇಟ್ಕೊಂಡು ದಂಧೆ ಮಾಡ್ತಿದ್ದ. ಆರೋಪಿ ರತನ್ ಜೊತೆ ರೇವಣ್ಣ ಎಂಬಾತನೂ ಸಾಥ್ ಕೊಟ್ಟಿದ್ದ. ಥೈಲ್ಯಾಂಡ್ ಬ್ಯೂಟಿ ಬಳಸಿ ಓರ್ವ ಗಿರಾಕಿಯಿಂದ 8 ರಿಂದ 10,000 ರೂ. ವಸೂಲಿ ಮಾಡುತ್ತಿದ್ದರು ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಬೋಗಾದಿ ಬಳಿ ಇರುವ ಹೋಟೆಲ್‌ನಲ್ಲಿ ವಾಸವಿದ್ದ ಥೈಲ್ಯಾಂಡ್ ಯುವತಿ ಜೊತೆ ಮತ್ತೊಬ್ಬ ಯುವತಿಯೂ ವೇಶ್ಯೆವಾಟಿಕೆಯಲ್ಲಿ ತೊಡಗಿದ್ದಳು. ವೇಶ್ಯಾವಾಟಿಕೆ ನೆಡೆಯುತಿದ್ದ ಸ್ಥಳಕ್ಕೆ ಒಡನಾಡಿ ಸೇವಾ ಸಂಸ್ಥೆ, ಪೊಲೀಸರು ದಾಳಿ ಮಾಡಿ ಇಬ್ಬರು ಯುವತಿಯರ ರಕ್ಷಣೆ ಮಾಡಿದ್ದಾರೆ. ಜೊತೆಗೆ ಪೊಲೀಸರು 7 ಜನರನ್ನ ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಕೇಳಿದ್ದಕ್ಕೆ ಬ್ಯುಸಿನೆಸ್ ಪರ್ಪಸ್‌ಗೆ ಬಂದಿದ್ದೇನೆ ಎಂದ ಥೈಲ್ಯಾಂಡ್ ಯುವತಿ ಹೇಳಿದ್ದಾಳೆ. 1 ದಿನದ ಹಿಂದಷ್ಟೇ ಮೈಸೂರಿಗೆ ಬಂದಿದ್ದೆ ಎಂಬ ಮಾಹಿತಿ ನೀಡಿದ್ದಾಳೆ. ಸರಸ್ವತಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಾನನಷ್ಟ ಮೊಕದ್ದಮೆ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೋರ್ಟ್‌ ನೋಟಿಸ್