Select Your Language

Notifications

webdunia
webdunia
webdunia
webdunia

ದೇಶದ ಎರಡನೇ ಅತೀ ಎತ್ತರದ ಧ್ವಜಸ್ತಂಭ ವಿಜಯನಗರದಲ್ಲಿ ಗಣರಾಜ್ಯೋತ್ಸವ ವೇಳೆ ಇದೆಂಥಾ ಘಟನೆ

76th Republic Day Celebration

Sampriya

ವಿಜಯನಗರ , ಭಾನುವಾರ, 26 ಜನವರಿ 2025 (12:15 IST)
Photo Courtesy X
ವಿಜಯನಗರ: ದೇಶದ ಎರಡನೇ ಅತಿ ಎತ್ತರದ ಧ್ವಜಸ್ತಂಭ ಎಂಬ ಹೆಗ್ಗಳಿಕೆಗೆ ಪಾತ್ರವಾದ ವಿಜಯನಗರದಲ್ಲಿ ಭಾನುವಾರ ಗಣರಾಜ್ಯೋತ್ಸವ ನಡೆಯುತ್ತಿದ್ದ ವೇಳೆ ಬೃಹತ್ ಧ್ವಜ ಕುಸಿದು ಬಿದ್ದಿರುವ ಘಟನೆ ನಡೆದಿದೆ.

76ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದ ಕೆಲ ಸಮಯದಲ್ಲೇ ಬೃಹತ್ ತ್ರಿವರ್ಣ ಧ್ವಜ ಧ್ವಜಸ್ತಂಭದಿಂದ ಕುಸಿದು ಬಿದ್ದ ಘಟನೆ ನಡೆದಿದೆ.

ವಿಜಯನಗರದ ಪುನೀತ್ ರಾಜ್ ಕುಮಾರ್ ಕ್ರೀಡಾಂಗಣದಲ್ಲಿರುವ ಧ್ವಜಸ್ತಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಚಿವ ಜಮೀರ್ ಅಹ್ಮದ್ ಇಂದು ಸಾಂಕೇತಿಕವಾಗಿ ಧ್ವಜಾರೋಹಣ ನೆರವೇರಿಸಿದ್ದರು. ಧ್ವಜಾರೋಹಣದ ಬಳಿಕ ಪರೇಡ್ ವೀಕ್ಷಿಸಿ, ಸಚಿವರು ಗೌರವ ವಂದನೆ ಸ್ವೀಕರಿಸುತ್ತಿದ್ದರು.

ಈ ವೇಳೆ ಬೃಹತ್ ಧ್ವಜಸ್ತಂಭದಲ್ಲಿದ್ದ ಬೃಹತ್ ತ್ರಿವರ್ಣ ಧ್ವಜ ಏಕಾಏಕಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ. ಈ ವೇಳೆ ಗರಂ ಆದ ಸಚಿವರು ಧ್ವಜಸ್ತಂಭದಿಂದ ಧ್ವಜ ಬೀಳುವಂತೆ ಧ್ವಜ ಕಟ್ಟಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IMD Weather Forecast: ಈ ತಿಂಗಳ ಕೊನೆಯಲ್ಲಿ ಈ ಭಾಗಗಲ್ಲಿ ಭಾರೀ ಮಳೆ