ಚಿಕ್ಕೋಡಿ: ಸದ್ಯ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಡಿನ್ನರ್ ಪಾರ್ಟಿ ಹಾಗೂ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣದ ನಡುವೆ ವಾಕ್ಸಮರ ಜೋರಾಗಿದೆ. ಇದೀಗ ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಅವರು ನೀಡಿರುವ ಭವಿಷ್ಯ ರಾಜ್ಯ ರಾಜಕಾರಣದಲ್ಲಿ ಹೊಸ ಕುತೂಹಲವನ್ನು ಮೂಡಿಸಿದೆ.
ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಡಿಕೆ ಶಿವಕುಮಾರ್ ಅವರು ತುಂಬಾ ಕೆಲಸ ಮಾಡಿದ್ದಾರೆ. ರಾಜಕೀಯದಲ್ಲಿ ಅವರು ನಾಟಕವಾಡಿಲ್ಲ, ನಾಟಕ ಮಾಡಲು ಬರುವುದಿಲ್ಲ. ಅವರು ಸಿಎಂ ಆದರೆ ಖುಷಿ ಪಡುತ್ತೇವೆ. ಅವರು ಸಿಎಂ ಆಗಲಿ ಎಂದು ವೈಕುಂಠ ಏಕಾದಶಿ ದಿನ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.
ಅಜ್ಜಯ್ಯನ ಮೇಲೆ ನಿಷ್ಠೆ, ಧರ್ಮದ ಮೇಲೆ ಗೌರವ ಅವರಿಗಿದೆ. ಗುರುಗಳ ಅನುಗ್ರಹದಿಂದ ಇದೇ ಸರ್ಕಾರದ ಅವಧಿಯಲ್ಲಿ ಅವರು ಸಿಎಂ ಸೀಟಲ್ಲಿ ಕೂರುತ್ತಾರೆ ಎಂದಿದ್ದಾರೆ.
ಇದೀಗ ಸಿಎಂ ಕುರ್ಚಿಗಾಗಿ ಕಾಮಗ್ರೆಸ್ ಪಕ್ಷದಲ್ಲಿ ನಾಯಕರುಗಳ ಮಧ್ಯೆ ನಡೆಯುತ್ತಿರುವ ಗುದ್ದಾಟದಲ್ಲಿ ವಿನಯ್ ಗುರೂಜಿ ಅವರ ಭವಿಷ್ಯ ಭಾರೀ ಸದ್ದು ಮಾಡುತ್ತಿದೆ.