Select Your Language

Notifications

webdunia
webdunia
webdunia
webdunia

ನಾನೂ ತಪ್ಪು ಮಾಡಿದ್ದೇನೆ: ಸಂದರ್ಶನದಲ್ಲಿ ಮನದಾಳ ಬಿಚ್ಚಿಟ್ಟ ಪ್ರಧಾನಿ ಮೋದಿ

Modi podcaste

Krishnaveni K

ನವದೆಹಲಿ , ಶುಕ್ರವಾರ, 10 ಜನವರಿ 2025 (16:35 IST)
ನವದೆಹಲಿ: ನಾನೇನೂ ದೇವರಲ್ಲ, ನಾನೂ ತಪ್ಪು ಮಾಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಮನದಾಳ ಹಂಚಿಕೊಂಡಿದ್ದಾರೆ.

ಕನ್ನಡಿಗ ನಿಖಿಲ್ ಕಾಮತ್ ಜೊತೆಗಿನ ಪಾಡ್ ಕಾಸ್ಟ್ ನಲ್ಲಿ ಮೋದಿ ತಮ್ಮ ಜೀವನದ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಮೋದಿ ಪಾಡ್ ಕಾಸ್ಟ್ ನಲ್ಲಿ ಭಾಗಿಯಾಗಿದ್ದಾರೆ.

ಈ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ನಾನೂ ತಪ್ಪು ಮಾಡಿದ್ದೇನೆ. ನಾನೇನೂ ದೇವರಲ್ಲ. ನಾನು ಮನುಷ್ಯ ಅಷ್ಟೇ. ಮನುಷ್ಯನಾದ ಮೇಲೆ ತಪ್ಪುಗಳನ್ನು ಮಾಡೋದು ಸಹಜ. ಇದನ್ನು ಈ ಹಿಂದೆ ಗುಜರಾತ್ ಸಿಎಂ ಆಗಿದ್ದಾಗಲೂ ಹೇಳಿದ್ದೆ ಎಂದಿದ್ದಾರೆ.

ಈ ಸಂದರ್ಶನದಲ್ಲಿ ಮೋದಿ ಕೇವಲ ರಾಜಕೀಯ ಜೀವನ ಮಾತ್ರವಲ್ಲ ತಮ್ಮ ವೈಯಕ್ತಿಕ ಜೀವನ, ಆಧ್ಯಾತ್ಮಿಕ ಚಿಂತನೆಗಳನ್ನು ತೆರೆದಿಟ್ಟಿದ್ದಾರೆ. ಇನ್ನು, ಮೋದಿ ನಾನು ದೇವರಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಇದು ಡ್ಯಾಮೇಜ್ ಕಂಟ್ರೋಲ್ ಸ್ಟೇಟ್ ಮೆಂಟ್ ಎಂದು ವ್ಯಂಗ್ಯ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

4ರಿಂದ 5 ತಿಂಗಳು ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 2 ಸ್ಥಗಿತ, ಕಾರಣ ಹೀಗಿದೆ