Select Your Language

Notifications

webdunia
webdunia
webdunia
webdunia

ಬಿಗ್ ಸರ್ಪ್ರೈಸ್: ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ! ಎನ್ ಸಿಪಿ ಬೆಂಬಲದೊಂದಿಗೆ ದೇವೇಂದ್ರ ಫಡ್ನವಿಸ್ ಪ್ರಮಾಣ!

ಬಿಗ್ ಸರ್ಪ್ರೈಸ್: ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ! ಎನ್ ಸಿಪಿ ಬೆಂಬಲದೊಂದಿಗೆ ದೇವೇಂದ್ರ ಫಡ್ನವಿಸ್ ಪ್ರಮಾಣ!
ಮುಂಬೈ , ಶನಿವಾರ, 23 ನವೆಂಬರ್ 2019 (09:17 IST)
ಮುಂಬೈ: ಎನ್ ಸಿಪಿ, ಕಾಂಗ್ರೆಸ್ ಜತೆಗೂಡಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದ ಶಿವಸೇನೆಗೆ ಬಿಗ್ ಶಾಕ್ ನೀಡಿರುವ ಎನ್ ಸಿಪಿ ಕೆಲವು ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದು, ದೇವೇಂದ್ರ ಫಡ್ನವಿಸ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.


ರಾತ್ರಿ ನಡೆದ ಹೈಡ್ರಾಮಾದಲ್ಲಿ ಅಜಿತ್ ಪವಾರ್ ಬಣದ ಸುಮಾರು 22 ಎನ್ ಸಿಪಿ ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಇವರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಇದು ಶಿವಸೇನೆ ಮತ್ತು ಕಾಂಗ್ರೆಸ್ ಗೆ ನಿಜಕ್ಕೂ ಶಾಕ್ ಆಗಿದೆ.

ಬಿಜೆಪಿ 105 ಸ್ಥಾನಗಳನ್ನು ಗೆದ್ದಿತ್ತು. ಎನ್ ಸಿಪಿ ಒಟ್ಟು ಸಂಖ್ಯಾ ಬಲ 54 ರಷ್ಟಿದೆ. ಎಲ್ಲಾ ಎನ್ ಸಿಪಿ ಶಾಸಕರು ಬಿಜೆಪಿ ಬೆಂಬಲಕ್ಕೆ ನಿಂತರೆ ಬಹುಮತ ಸಾಬೀತ ಸುಲಭವಾಗಲಿದೆ. ಬಹುಮತ ಸಾಬೀತಿನ ಬಳಿಕ ಸಂಪುಟ ವಿಸ್ತರಣೆ ಮಾಡುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನದಲ್ಲಿ ಮೂತ್ರ ಕಟ್ಟಿಕೊಂಡದ್ದ ಪ್ರಯಾಣಿಕನ ಜೀವ ಉಳಿಸಿದ ವೈದ್ಯ