Publish Date: Fri, 22 Nov 2019 (19:03 IST)
Updated Date: Fri, 22 Nov 2019 (19:05 IST)
ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅಳಲು ಹೇಳಿಕೊಂಡಿದ್ದಾರೆ.
ಅಥಣಿಯ ಸವದಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಟಳ್ಳಿ, ಮಾಧ್ಯಮವದರೆಲ್ಲ ಅನರ್ಹರು...ಅನರ್ಹರು ಅಂತಾ ಕೇಳ್ತಾ ಇದೀರಾ. ನಾವು ಸಮ್ಮಿಶ್ರ ಸರ್ಕಾರದಲ್ಲಿ ನಾವಾಗಿಯೇ ಹೊರ ಬಂದವರು.
ನಾವು ಸ್ವತಃ ರಾಜೀನಾಮೆ ಕೊಟ್ಟ ಬಳಿಕ ಸ್ಪೀಕರ್ ಅನರ್ಹ ಮಾಡಿದ್ದಾರೆ. ಸ್ವತಃ ನಾವೇ ಹೊರ ಬಂದಿದ್ದೇವೆ ಅಂತ ಹೇಳಿಕೊಂಡಿದ್ದಾರೆ.