Select Your Language

Notifications

webdunia
webdunia
webdunia
webdunia

ಅನರ್ಹ ಶಾಸಕ ಶ್ರೀಮಂತ ಪಾಟೀಲ್ ರಾಜಕೀಯ ವ್ಯಕ್ತಿಯಲ್ಲ ಎಂದ ಕಾಂಗ್ರೆಸ್ ಅಭ್ಯರ್ಥಿ

ಅನರ್ಹ ಶಾಸಕ ಶ್ರೀಮಂತ ಪಾಟೀಲ್ ರಾಜಕೀಯ ವ್ಯಕ್ತಿಯಲ್ಲ ಎಂದ ಕಾಂಗ್ರೆಸ್ ಅಭ್ಯರ್ಥಿ
ಬೆಳಗಾವಿ , ಗುರುವಾರ, 21 ನವೆಂಬರ್ 2019 (10:52 IST)
ಬೆಳಗಾವಿ : ಅನರ್ಹ ಶಾಸಕ ಶ್ರೀಮಂತ ಪಾಟೀಲ್ ರಾಜಕೀಯ ವ್ಯಕ್ತಿಯಲ್ಲ. ಅವರೊಬ್ಬ ಬ್ಯುಸಿನೆಸ್ ಮ್ಯಾನ್  ಎಂದು ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ನಿರೀಕ್ಷೆ ಇಟ್ಕೊಂಡು ಶ್ರೀಮಂತ ಪಾಟೀಲ್ ಆಯ್ಕೆಯಾಗಿದ್ದರು. ಆದರೆ 14 ತಿಂಗಳು ಶ್ರೀಮಂತ ಪಾಟೀಲ್ ಕ್ಷೇತ್ರದತ್ತ ತಲೆ ಹಾಕಿಲ್ಲ. ನಾನು ಜನರ ಬಳಿ ತೆರಳಿ ಮತಭಿಕ್ಷೆ ಕೇಳುವ ಅವಶ್ಯಕತೆ ಇಲ್ಲ. ಶೇ. 90ರಷ್ಟು ಜನರೇ ನನ್ನನ್ನು ಆಯ್ಕೆ ಮಾಡೋದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

 

ಹಾಗೇ ಪ್ರಕಾಶ್ ಹುಕ್ಕೇರಿ ಪ್ರಚಾರಕ್ಕೆ ಬಾರದೇ ಇರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಪ್ರಕಾಶ್ ಹುಕ್ಕೇರಿಗೆ ಆರೋಗ್ಯ  ಸರಿಯಿಲ್ಲ. ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ ನನ್ನ ಪರ ಪ್ರಚಾರ ಮಾಡ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಅಪರೇಷನ್ ಕಮಲಕ್ಕೆ ಸಿಎಂಗೆ ಎಂಟಿಬಿ ಹಣವನ್ನು ನೀಡಿದ್ದಾರೆ- ಸಿದ್ದರಾಮಯ್ಯ ಆರೋಪ