ಮುಂಬೈ (ಮಹಾರಾಷ್ಟ್ರ): ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ನಾಲ್ವರು ಗುತ್ತಿಗೆ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮುಂಬೈನ ನಾಗಪಾದದ ಮಿಂಟ್ ರಸ್ತೆಯಲ್ಲಿರುವ ಗುಡ್ ಲಕ್ ಮೋಟಾರ್ ತರಬೇತಿ ಶಾಲೆಯ ಬಳಿ ನಡೆದಿದೆ.
ಮೃತರನ್ನು ಹಸಿಪಾಲ್ ಶೇಖ್ (19), ರಾಜಾ ಶೇಖ್ (20), ಜಿಯಾವುಲ್ಲಾ ಶೇಖ್ (36) ಮತ್ತು ಇಮಾಂಡು ಶೇಖ್ (38) ಎಂದು ಗುರುತಿಸಲಾಗಿದೆ.
ನೀರಿನ ಟ್ಯಾಂಕ್‌ನಲ್ಲಿದ್ದ ಐದನೇ ಕಾರ್ಮಿಕ ಪುರ್ಹಾನ್ ಶೇಖ್ (31) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ಪ್ರಕಾರ, ಈ ಘಟನೆ ಮಧ್ಯಾಹ್ನ 12.29 ಕ್ಕೆ ಮುಂಬೈನ ನಾಗಪಾದದ ಮಿಂಟ್ ರಸ್ತೆಯಲ್ಲಿರುವ ಗುಡ್ ಲಕ್ ಮೋಟಾರ್ ತರಬೇತಿ ಶಾಲೆಯ ಬಳಿ ನಡೆದಿದ್ದು, ಮಧ್ಯಾಹ್ನ 1.35 ಕ್ಕೆ ಮುಂಬೈ ಅಗ್ನಿಶಾಮಕ ದಳ ವರದಿ ಮಾಡಿದೆ.
ಗುತ್ತಿಗೆ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಮತ್ತು ಮುಂಬೈ ಅಗ್ನಿಶಾಮಕ ದಳವು ಅವರನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈಗಾಗಲೇ ಅವರು ಸತ್ತಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಕಾರ್ಮಿಕರಲ್ಲಿ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.