ವಡೋದರಾ: ಮಹಿಳೆಯರ ಪ್ರೀಮಿಯರ್ ಲೀಗ್ (WPL) 2025 ಪಂದ್ಯಾವಳಿ ಮೊದಲ ಪಂದ್ಯಾಟದಲ್ಲಿ ಆರ್‌ಸಿವಿ ತಂಡ 200 ರನ್‌ಗಳನ್ನು ಚೇಸ್ ಮಾಡಿ ಗೆಲ್ಲುವ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದೆ.
ಈ ಮೂಲಕ 2025ರ WPL ಹೊಸ ದಾಖಲೆಯೊಂದಿಗೆ ಆರಂಭಗೊಂಡಿದ್ದು, ಇಂದು ಎರಡನೇ ಪಂದ್ಯಾಟ ವಡೋದರಾದ ಕೊಟಂಬಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಎರಡನೇ ಪಂದ್ಯವು ಮುಂಬೈ ಇಂಡಿಯನ್ಸ್ ಮಹಿಳೆಯರು ಮತ್ತು ದೆಹಲಿ ಕ್ಯಾಪಿಟಲ್ಸ್ ಮಹಿಳೆಯರ ನಡುವಿನ ಹೈ ವೋಲ್ಟೇಜ್ ಪಂದ್ಯಾಟವನ್ನು ನಿರೀಕ್ಷಿಸಲಾಗಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿ, ಮುಂಬೈ ಇಂಡಿಯನ್ಸ್‌ರನ್ನು ಬ್ಯಾಟಿಂಗ್‌ಗೆ ಸ್ವಾಗತಿಸಿದೆ.
2023 ರಲ್ಲಿ ಮೊದಲ WPL ನ ಫೈನಲಿಸ್ಟ್‌ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಎರಡೂ ಕಳೆದ ವರ್ಷ ಎರಡನೇ ಆವೃತ್ತಿಯಲ್ಲಿ ನಾಕೌಟ್‌ಗೆ ಪ್ರವೇಶಿಸಿದವು ಆದರೆ ಫೈನಲ್‌ನಲ್ಲಿ ಕ್ರಮವಾಗಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತವು.