ಬೆಂಗಳೂರು: ಮುಂಬೈ ಇಂಡಿಯನ್ಸ್ (MI) ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಪಂದ್ಯ ಶುಲ್ಕದ 10% ದಂಡ ವಿಧಿಸಲಾಗಿದೆ.
WPL 2025 ರ UP ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ಆನ್ ಫೀಲ್ಡ್ ಅಂಪೈರ್ ನಿರ್ಧಾರಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿದೆ. ಮಾರ್ಚ್ 6 ರಂದು ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಹರ್ಮನ್ ಪ್ರೀತ್ ನಡವಳಿಕೆಗೆ ಇದೀಗ ದಂಡ ವಿಧಿಸಲಾಗಿದೆ.
ಕೊನೆಯ ಓವರ್‌ನಲ್ಲಿ ನಿಧಾನಗತಿಯ ಓವರ್ ರೇಟ್ ಇರುವುದರಿಂದ ಕೇವಲ ಮೂವರು ಫೀಲ್ಡರ್‌ಗಳು ಮಾತ್ರ ವೃತ್ತದ ಹೊರಗೆ ಉಳಿಯಬಹುದು ಎಂದು ಹರ್ಮನ್‌ಪ್ರೀತ್ ಕೌರ್ ಅವರಿಗೆ ಅಂಪೈರ್ ಅಜಿತೇಶ್ ಅರ್ಗಲ್ ತಿಳಿಸಿದ್ದರು. ಇದರಿಂದ ಸಿಟ್ಟಾದ ಹರ್ಮನ್‌ಪ್ರೀತ್ ಕೌರ್ ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಹರ್ಮನ್ ಜೊತೆ ಅಮೆಲಿಯಾ ಕೆರ್ ಕೂಡ ವಾಗ್ವಾದಕ್ಕೆ ಕೈ ಜೋಡಿಸಿದ್ದರು.
BCCI ಪ್ರಕಾರ, ಹರ್ಮನ್‌ಪ್ರೀತ್ ಕೌರ್ ಪಂದ್ಯದ ಸಮಯದಲ್ಲಿ ಅಂಪೈರ್ ತೀರ್ಪಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಸಂಬಂಧಿಸಿದ ಸೆಕ್ಷನ್ 2.8 ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಲೆವೆಲ್ 1 ಅಪರಾಧದಲ್ಲಿ ಪಂದ್ಯದ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ