ಇರಾನ್: ಇಂದು ನಡೆದ ಏಷ್ಯನ್ ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡವು ಇರಾನ್ ವಿರುದ್ಧ ಭರ್ಜರಿ ಜಯಗಳಿಸಿತು. ವಿಶ್ವ ಮಹಿಳಾ ವಿಶೇಷ ದಿನದಂದು ಭಾರತೀಯ ಮಹಿಳಾ ಕಬಡ್ಡಿ ತಂಡ ವಿಶೇಷ ಸಾಧನೆಯನ್ನು ಮಾಡಿ, ದೇಶಕ್ಕೆ ಹೆಮ್ಮೆ ತಂದಿದೆ.
ಇದು ಏಷ್ಯಾದ ದೇಶಗಳು ಪರಸ್ಪರ ಸ್ಪರ್ಧಿಸುವ ಸ್ಪರ್ಧೆಯಾಗಿದೆ. ಇದನ್ನು ಅಂತರರಾಷ್ಟ್ರೀಯ ಕಬಡ್ಡಿ ಫೆಡರೇಶನ್ (ಐಕೆಎಫ್) ಮಾರ್ಗದರ್ಶನದಲ್ಲಿ ನಡೆಸಲಾಗುತ್ತದೆ.
ಕಬಡ್ಡಿ ಪಂದ್ಯಾಟ ಇರಾನ್‌ನ ಟೆಹ್ರಾನ್‌ನಲ್ಲಿ ನಡೆದಿದ್ದು, 7 ತಂಡಗಳು 2 ಪೂಲ್‌ಗಳಾಗಿ ವಿಂಗಡಿಸಲಾಗಿದೆ.
ನಿನ್ನೆ ಆತಿಥೇಯ ಇರಾನ್, ಹಾಲಿ ಚಾಂಪಿಯನ್ ಭಾರತ, ನೇಪಾಳ ಮತ್ತು ಬಾಂಗ್ಲಾದೇಶ ಗೆಲುವಿನ ನಂತರ ಸೆಮಿಫೈನಲ್ ಹಂತವನ್ನು ತಲುಪಿದವು. ಇದೀಗ ಇಂದು ನಡೆದ ಫೈನಾಲ್‌ನಲ್ಲಿ 32–25ರೊಂದಿಗೆ ಇರಾನ್ ಅನ್ನು ಭಾರತ ತಂಡ ಸೋಲಿಸಿತು.