ದುಬೈ: ಚಾಂಪಿಯನ್ಸ್ ಟ್ರೋಫಿ 2025 ರ ಫೈನಲ್ ಪಂದ್ಯ ನಾಳೆ ನಡೆಯಲಿದ್ದು, ಫೈನಲ್ ಪಂದ್ಯಕ್ಕೆ ಬಳಸಲಾಗುವ ಪಿಚ್ ಯಾವುದು ಎಂದು ಬಹಿರಂಗವಾಗಿದೆ. ಇದರ ಬಗ್ಗೆ ತಿಳಿದು ಟೀಂ ಇಂಡಿಯಾಗಂತೂ ಖುಷಿಯಾಗಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಾಳೆ ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಇದಕ್ಕಾಗಿ ಎರಡೂ ತಂಡಗಳೂ ಈಗಾಗಲೇ ಕಠಿಣ ಅಭ್ಯಾಸ ನಡೆಸುತ್ತಿವೆ.
ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಟೀಂ ಇಂಡಿಯಾ ಫೈನಲ್ ಗೇರಿದ್ದರೆ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ನ್ಯೂಜಿಲೆಂಡ್ ಫೈನಲ್ ಗೆ ಅರ್ಹತೆ ಪಡೆದಿತ್ತು. ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದುವರೆಗೆ ಅಜೇಯವಾಗಿದೆ. ಆದರೆ ಕಿವೀಸ್ ಲೀಗ್ ಪಂದ್ಯಗಳಲ್ಲಿ ಭಾರತದ ವಿರುದ್ಧ ಸೋತಿತ್ತು.
ಇದೀಗ ಫೈನಲ್ ಪಂದ್ಯವಾಡುವ ಪಿಚ್ ಯಾವುದು ಎಂಬುದು ಬಹಿರಂಗವಾಗಿದೆ. ಮೂಲಗಳ ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವೆ ಲೀಗ್ ಪಂದ್ಯ ನಡೆದಿದ್ದ ಅದೇ ಪಿಚ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಂಡಿತ್ತು. ವಿಶೇಷವಾಗಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದೀಗ ಅದೇ ಪಿಚ್ ನಲ್ಲಿ ಆಡುತ್ತಿರುವ ವಿಚಾರ ಟೀಂ ಇಂಡಿಯಾಗೆ ಖುಷಿ ಕೊಟ್ಟಿದೆ.