Select Your Language

Notifications

webdunia
webdunia
webdunia
webdunia

ಭಾರತದ ಟೇಬಲ್‌ ಟೆನಿಸ್‌ ದಿಗ್ಗಜ ಆಟಗಾರ ಶರತ್ ಕಮಲ್ ದಿಢೀರ್‌ ನಿವೃತ್ತಿ ಘೋಷಣೆ

 Indian Former Table Tennis Player Sharath Kamal, Sharath Kamal Retirement Reason, Sharath Kamal Records

Sampriya

ನವದೆಹಲಿ , ಬುಧವಾರ, 5 ಮಾರ್ಚ್ 2025 (19:02 IST)
Photo Courtesy X
ನವದೆಹಲಿ: ಕಳೆದ ಐದು ಒಲಿಂಪಿಕ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಭಾರತದ ಟೇಬಲ್ ಟೆನಿಸ್ ದಿಗ್ಗಜ ಆಟಗಾರ ಅಚಂತ ಶರತ್ ಕಮಲ್ ಅವರು ದಿಢೀರ್‌ ನಿವೃತ್ತಿ ಪ್ರಕಟಿಸಿದ್ದಾರೆ.

ಎರಡು ದಶಕಗಳಿಂದ ಟೇಬಲ್‌ ಟೆನಿಸ್‌ ಆಡುತ್ತಿರುವ ಅವರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಏಳು ಚಿನ್ನ ಸೇರಿ 13 ಪದಕ ಗೆದ್ದಿರುವ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಕಂಚಿನ ಪದಕಗಳನ್ನು ಜಯಿಸಿದ್ದಾರೆ.

2024ರ ಅಥೆನ್ಸ್‌ ಒಲಿಂಪಿಕ್ಸ್‌ನಿಂದ ಹಿಡಿದ ಐದು ಒಲಿಂಪಿಕ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಶರತ್, ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿದ್ದರು.‌

‘ನನ್ನ ತವರು ಚೆನ್ನೈಯಲ್ಲಿ ನಾನು ಮೊದಲ ಅಂತರರಾಷ್ಟ್ರೀಯ ಟೂರ್ನಿ ಆಡಿದ್ದೇನೆ. ಈಗ ನನ್ನ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಇದೇ ತಿಂಗಳ ಕೊನೆಯಲ್ಲಿ ಚೆನ್ನೈನಲ್ಲಿಯೇ ಆಡಲಿದ್ದೇನೆ. ಒಬ್ಬ ವೃತ್ತಿಪರ ಕ್ರೀಡಾಪಟುವಾಗಿ ಇದು ನನ್ನ ಕೊನೆಯ ಟೂರ್ನಿಯಾಗಿರಲಿದೆ’ ಎಂದು ಹೇಳಿದ್ದಾರೆ.

42 ವರ್ಷ ಅವರಿಗೆ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ, 2022ರಲ್ಲಿ ಖೇಲ್‌ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ದಾಖಲೆಯ 10 ಬಾರಿ ರಾಷ್ಟ್ರೀಯ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡ ಹಿರಿಮೆ ಅವರದು.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಟೂರ್ನಿಗಳಲ್ಲಿ ಐದನೇ ಶತಕ ಸಿಡಿಸಿ ದಾಖಲೆ ಬರೆದ ಬೆಂಗಳೂರು ಮೂಲದ ರಚಿನ್ ರವೀಂದ್ರ