ಬೆಂಗಳೂರು: ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಎರಡನೇ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡ 362ರನ್ ಗಳಿಸಿದೆ. ಈ ರನ್‌ನಲ್ಲಿ ಬೆಂಗಳೂರು ಮೂಲದ ರಚಿನ್ ರವೀಂದ್ರ ಅವರ ಕೊಡುಗೆ ಅಪಾರವಾಗಿದೆ.
ರಚಿನ್ ರವೀಂದ್ರ ಅವರು ಮಾಸ್ಟರ್‌ಫುಲ್ ಶತಕದೊಂದಿಗೆ ಹೊಸ ದಾಖಲೆಯನ್ನು ಬರೆದಿದ್ದಾರೆ. 101 ಎಸೆತಗಳಲ್ಲಿ 108 ರನ್ ಗಳಿಸಿ ICC ಟೂರ್ನಿಯಲ್ಲಿ ತಮ್ಮ ಮೊದಲ ಐದು ODI ಶತಕಗಳನ್ನು ಗಳಿಸಿದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ರವೀಂದ್ರ ಅವರ 108 ಮತ್ತು ವಿಲಿಯಮ್ಸನ್ ಅವರ 102 ರನ್‌ಗಳ ನೆರವಿನಿಂದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ 362/6 ಕ್ಕೆ ಬೃಹತ್ ಮೊತ್ತವನ್ನು ಗಳಿಸಿತು.
ಈ ಚಾಂಪಿಯನ್ಸ್ ಟ್ರೋಫಿಯಲ್ಲಿ ರವೀಂದ್ರ ಅವರ ಎರಡನೇ ಶತಕ ಇದಾಗಿದೆ. ಗಾಯದ ಕಾರಣ ಪಾಕಿಸ್ತಾನದ ವಿರುದ್ಧದ ಪಂದ್ಯಾವಳಿಯ ಆರಂಭಿಕ ಪಂದ್ಯವನ್ನು ಕಳೆದುಕೊಂಡ ನಂತರ, ರವೀಂದ್ರ ತನ್ನ ಚಾಂಪಿಯನ್ಸ್ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 112 ರನ್ ಗಳಿಸಿದರು. ಅವರು ಭಾರತದ ವಿರುದ್ಧದ ಪಂದ್ಯಾಟದಲ್ಲಿ 6 ರನ್ ಗಳಿಸಿ ಬೇಗನೇ ಪೆವಿನಿಯತ್ತ ತೆರಳಿದರು.