ಬೆಂಗಳೂರು: ಡಬ್ಲ್ಯುಪಿಎಲ್ 2025 ರಲ್ಲಿ ಸತತ ನಾಲ್ಕನೇ ಬಾರಿಗೆ ಟಾಸ್ ಸೋತ ಸ್ಮೃತಿ ಮಂಧನಾ ನೇತೃತ್ವದ ಆರ್ ಸಿಬಿ ಬ್ಯಾಟಿಂಗ್ ಮಾಡುತ್ತಿದೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಎಲ್ಲಾ ಮೂರೂ ಪಂದ್ಯಗಳನ್ನು ಸೋತ ಆರ್ ಸಿಬಿ ಈಗ ಗೆಲುವಿನ ಒತ್ತಡದಲ್ಲಿದೆ. ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಟಾಸ್ ಸೋತ ಸ್ಮೃತಿ ಮೊದಲು ಬ್ಯಾಟಿಂಗ್ ಗಿಳಿಸಲ್ಪಟ್ಟರು.
ಇದುವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲೂ ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ಸೋಲಾಗಿದ್ದೇ ಹೆಚ್ಚು. ಹೀಗಾಗಿ ಆರ್ ಸಿಬಿ ಈಗ ಒತ್ತಡದಲ್ಲಿದೆ. ಇಂದಿನ ಪಂದ್ಯದಲ್ಲಿ ಆರ್ ಸಿಬಿ ಇತ್ತೀಚೆಗಿನ ವರದಿ ಬಂದಾಗ 10 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ.
ನಾಯಕಿ ಸ್ಮೃತಿ ಮಂಧನಾ ಮತ್ತೊಮ್ಮೆ ಕೇವಲ 8 ರನ್ ಗಳಿಗೆ ವಿಕೆಟ್ ಒಪ್ಪಿಸಿದರೆ ಡ್ಯಾನಿಯಲ್ ವ್ಯಾಟ್ 21 ರನ್ ಗಳಿಸಿ ಔಟಾಗಿದ್ದಾರೆ. ಇದೀಗ 34 ರನ್ ಗಳಿಸಿರುವ ಎಲ್ಲಿಸ್ ಪೆರ್ರಿ ಮತ್ತು 6 ರನ್ ಗಳಿಸಿರುವ ರಾಘ್ವಿ ಬಿಸ್ತ್ ಬ್ಯಾಟಿಂಗ್ ಮಾಡುತ್ತಿದ್ದಾರೆ.