Select Your Language

Notifications

webdunia
webdunia
webdunia
webdunia

ಮಧ್ಯೆ ತಲೆ ಹಾಕಕ್ಕೆ ಬರಬೇಡ.. ಡಬ್ಲ್ಯುಪಿಎಲ್ ನಲ್ಲಿ ಎದುರಾಳಿ ಜೊತೆ ಹರ್ಮನ್ ಪ್ರೀತ್ ಕೌರ್ ಜಗಳ

Harmanpreet Kaur quarell

Krishnaveni K

ಮುಂಬೈ , ಶನಿವಾರ, 8 ಮಾರ್ಚ್ 2025 (09:37 IST)
Photo Credit: X
ಮುಂಬೈ: ಯುಪಿ ವಾರಿಯರ್ಸ್ ವಿರುದ್ಧ ನಡೆದ ಡಬ್ಲ್ಯುಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್ ಪ್ರೀತ್ ಕೌರ್ ನಿನ್ನ ಕೆಲಸ ನೀನು ನೋಡಿಕೋ ಎಂದು ಎದುರಾಳಿ ಆಟಗಾರ್ತಿ ಜೊತೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ.

ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 150 ರನ್ ಕಲೆ ಹಾಕಿತ್ತು. ಈ ಗುರಿಯನ್ನು 18.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಬೆನ್ನತ್ತುವ ಮೂಲಕ ಮುಂಬೈ 6 ವಿಕೆಟ್ ಗಳ ಗೆಲುವು ಸಾಧಿಸಿತು.

ಯುಪಿ ಇನಿಂಗ್ಸ್ ವೇಳೆ 19 ನೇ ಓವರ್ ನಲ್ಲಿ ನಿಧಾನಗತಿಯ ಓವರ್ ಮಾಡಿದ್ದಕ್ಕೆ ಅಂಪಾಯರ್ ಓರ್ವ ಫೀಲ್ಡರ್ ನನ್ನು ಬೌಂಡರಿ ಲೈನ್ ನಿಂದ ಒಳಗೆ ಕರೆಸಿಕೊಳ್ಳಲು ಹರ್ಮನ್ ಪ್ರೀತ್ ಕೌರ್ ಗೆ ಸೂಚಿಸಿದರು. ಈ ವೇಳೆ ಹರ್ಮನ್ ಅಂಪಾಯರ್ ಜೊತೆ ವಾದ ಮಾಡುತ್ತಿದ್ದರು.

ಈ ವೇಳೆ ಎದುರಾಳಿ ಆಟಗಾರ್ತಿ ಎಕ್ಲೆಸ್ಟೋನ್ ಬೇಕೆಂದೇ ಹರ್ಮನ್ ರನ್ನು ಕೆಣಕಿದರು. ಇದರಿಂದ ಕೆರಳಿದ ಹರ್ಮನ್ ನಿನ್ನ ಕೆಲಸ ಎಷ್ಟಿದೆ ಅಷ್ಟು ನೋಡಿಕೋ. ಇಲ್ಲಿ ಮಧ್ಯೆ ತಲೆ ಹಾಕಲು ಹೋಗಬೇಡ ಎಂದು ಗರಂ ಆಗಿ ಹೇಳಿದ್ದಾರೆ. ಇಬ್ಬರ ನಡುವೆ ವಾಗ್ವಾದ ನಡೆದಿದ್ದು ಬಳಿಕ ಅಂಪಾಯರ್ ಗಳು ಜಗಳ ಬಿಡಿಸಬೇಕಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಹರ್ಲೀನ್‌ ಅಬ್ಬರಕ್ಕೆ ಬೆಚ್ಚಿದ ಕ್ಯಾಪಿಟಲ್ಸ್‌: ಆರ್‌ಸಿಬಿ ತಂಡದ ನಾಕೌಟ್‌ ಕನಸು ಮತ್ತಷ್ಟು ಕಠಿಣ