Publish Date: Sun, 28 Jan 2024 (19:32 IST)
Updated Date: Sun, 28 Jan 2024 (18:56 IST)
ಉತ್ತರಪ್ರದೇಶ :ಅಯೋಧ್ಯೆಯ ರಾಮಮಂದಿರವನ್ನು ಧ್ವಂಸಗೊಳಿಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೇಕ್ ಅಕೌಂಟ್ ಗಳನ್ನು ಸೃಷ್ಟಿಸಿಕೊಂಡಿದ್ದ ಈ ಮೂವರೂ ಶ್ರೀರಾಮ ಹಾಗೂ ಹಿಂದೂ ಸಮುದಾಯದ ಬಗ್ಗೆ ಅವಹೇಳನಕಾರಿ ಪೋಸ್ಟ್ ಗಳನ್ನು ಪ್ರಕಟಿಸುತಿದ್ದರು.ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ ಮೂವರು ಯುವಕರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬಿಜ್ನೋರ್ ಜಿಲ್ಲೆಯ ಇರ್ಷಾದ್, ಅಜ್ಮಲ್ ಮತ್ತು ಅಲಿ ಬಂಧಿತ ಆರೋಪಿಗಳು.
ಸಾಮರಸ್ಯಕ್ಕೆ ಧಕ್ಕೆ ತರುವುದಲ್ಲದೇ ಸಮಾಜದ ಶಾಂತಿಯನ್ನು ಕದಡಲು ಯತ್ನಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಮೂವರ ವಿರುದ್ದ ಸೈಬರ್ ಕ್ರೈಂ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.