Daily Horoscope

Select Your Language

Notifications

webdunia
webdunia
webdunia
webdunia

ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ಈಗ ಅಧಿಕೃತ: ಒಳ್ಳೆ ನಾಯಕನನ್ನು ಉಳಿಸಿಕೊಳ್ಳದ ಬಿಜೆಪಿ

Annamalai
ನವದೆಹಲಿ: ತಮಿಳುನಾಡು ಬಿಜೆಪಿಗೆ ಹೊಸ ಹುಟ್ಟು ಕೊಟ್ಟಿದ್ದ ಮಾಜಿ ಐಪಿಎಸ್ ಅಧಿಕಾರಿ
ಅಣ್ಣಾಮಲೈ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಇದೀಗ ಅಧಿಕೃತವಾಗಿದೆ. ಇದರ ಬೆನ್ನಲ್ಲೇ ಒಬ್ಬ ಒಳ್ಳೆ ನಾಯಕನನ್ನು ಬಿಜೆಪಿ ಉಳಿಸಿಕೊಳ್ಳಲಿಲ್ಲ ಎಂಬ ಆಕ್ರೋಶ ಬೆಂಬಲಿಗರಿಂದ ಕೇಳಿಬಂದಿದೆ.

ಅಣ್ಣಾಮಲೈ ಐಪಿಎಸ್ ಅಧಿಕಾರಿಯಾಗಿದ್ದಾಗಲೇ ಜನರ ಪ್ರೀತಿ ಗಳಿಸಿದವರು. ಅದಾದ ಬಳಿಕ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ತಮಿಳುನಾಡು ಬಿಜೆಪಿ ಹೊಣೆ ಹೊತ್ತರು. ತಮಿಳುನಾಡಿನಲ್ಲಿ ಎಐಡಿಎಂಕೆ ನೆರಳಿನಲ್ಲೇ ಇದ್ದ ಬಿಜೆಪಿಗೆ ತನ್ನದೇ ಅಸ್ತಿತ್ವ ತಂದುಕೊಟ್ಟ ಕೀರ್ತಿ ಅಣ್ಣಾಮಲೈ ಅವರದ್ದು. ಆದರೆ ಬಿಜೆಪಿ ಇದನ್ನು ಉಳಿಸಿಕೊಳ್ಳಲು ವಿಫಲವಾಗಿದೆ.

ಕೇವಲ ತಮಿಳುನಾಡಿಗೆ ಮಾತ್ರ ಸೀಮಿತವಾಗದೇ ಮಹಾರಾಷ್ಟ್ರ ಚುನಾವಣೆಯಲ್ಲಿ, ಕರ್ನಾಟಕ, ಕೇರಳ ಚುನಾವಣೆಗಳಲ್ಲೂ ಬಿಜೆಪಿ ಪರ ಪ್ರಚಾರ ಮಾಡಿದ್ದರು. ತಮಿಳುನಾಡಿನಲ್ಲಿ ಪಕ್ಷದ ಹೊರತಾಗಿಯೂ ಅಪಾರ ಜನ ಬೆಂಬಲ ಗಳಿಸಿದ್ದವರು.

ಆದರೆ ಕಳೆದ ತಮಿಳುನಾಡು ಚುನಾವಣೆಯಲ್ಲಿ ಎಐಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಅಣ್ಣಾಮಲೈಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಆದರೆ ಬಿಜೆಪಿ ತನ್ನ ಹಳೆಯ ಮೈತ್ರಿ ಕಡಿದುಕೊಳ್ಳಲು ತಯಾರಾಗಲಿಲ್ಲ. ಇದಲ್ಲದೇ ಇತ್ತೀಚೆಗೆ ಕೇಂದ್ರದ ತ್ರಿಭಾಷಾ ಸೂತ್ರವನ್ನೂ ಅವರು  ವಿರೋಧಿಸಿದ್ದರು.

ಇದರ ಬೆನ್ನಲ್ಲೇ ಪಕ್ಷಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದರು. ಮೊನ್ನೆಯೇ ದೆಹಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದರು. ಆದರೆ ಬಿಜೆಪಿ ಎರಡು ದಿನಗಳ ನಂತರ ಅಣ್ಣಾಮಲೈ ರಾಜೀನಾಮೆ ಅಂಗೀಕರಿಸಿದೆ. ಇದರೊಂದಿಗೆ ಅಣ್ಣಾಮಲೈ ಬಿಜೆಪಿಯಲ್ಲೇ ಉಳಿಯಬಹುದು, ಪಕ್ಷದ ನಾಯಕರು ಅವರ ಮನವೊಲಿಸಬಹುದು ಎಂದುಕೊಂಡಿದ್ದ ಬಿಜೆಪಿ ಬೆಂಬಲಿಗರ ಭರವಸೆ ಭಗ್ನವಾಗಿದೆ. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಕೇಂದ್ರ ನಾಯಕರ ಮೇಲೆ ಆಕ್ರೋಶ ವ್ಯಕ್ತವಾಗಿದೆ. ಕೇವಲ ತಮಿಳುನಾಡಿಗೆ ಮಾತ್ರವಲ್ಲ ದಕ್ಷಿಣ ಭಾರತಕ್ಕೇ ಭರವಸೆಯ, ಸ್ವಚ್ಛ ಹಿನ್ನಲೆಯ ನಾಯಕರಾಗಿದ್ದರು. ಅವರನ್ನು ಉಳಿಸಿಕೊಳ್ಳಲು ಬಿಜೆಪಿ ವಿಫಲವಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ