Select Your Language

Notifications

webdunia
webdunia
webdunia
webdunia

ಸತ್ಯ ಹೊರಬರ್ಬೇಕು, ಇಲ್ಲದಿದ್ರೆ ಅನುಮಾನದ ಕತ್ತಿ ನೇತಾಡುತ್ತದೆ: ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ

Sampriya

ಮೈಸೂರು , ಭಾನುವಾರ, 31 ಆಗಸ್ಟ್ 2025 (17:49 IST)
ಮೈಸೂರು: ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳದ ಸುತ್ತಾಮುತ್ತಾ ಹಲವು ಶವಗಳನ್ನು ಹೂತಿಟ್ಟ ಆರೋಪಗಳ ಬಗ್ಗೆ ಎನ್‌ಐಎ ತನಿಖೆಯ ಅಗತ್ಯವಿಲ್ಲ ಮತ್ತು ತನಿಖೆ ನಡೆಸಿ ವರದಿ ಸಲ್ಲಿಸಲು ಎಸ್‌ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಮೇಲೆ ಕೇಳಿಬಂದಿರುವ ಆರೋಪಗಳು ಮತ್ತು ಅನುಮಾನವನ್ನು ಹೋಗಲಾಡಿಸಲು ಮತ್ತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ಹೇಳಿದರು.

ಇನ್ನೂ ಧರ್ಮಸ್ಥಳದ ವಿರುದ್ಧದ ಅಪಪ್ರಚಾರವನ್ನು ವಿರೋಧಿಸಿ ಜೆಡಿಎಸ್‌, ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು,  ವಿರೋಧ ಪಕ್ಷದವರು ಎಲ್ಲ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಬೇಕಾದರೆ (ಧರ್ಮಸ್ಥಳಕ್ಕೆ) ಹೋಗಲಿ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದ್ದಾರೆ. ಸತ್ಯ ಹೊರಬರಬೇಕು. ಸತ್ಯವನ್ನು ಹೊರಗೆ ತರಲು ಎಸ್‌ಐಟಿ ರಚಿಸಲಾಗಿದೆ. ಸತ್ಯ ತಿಳಿಯಬೇಕು; ಇಲ್ಲದಿದ್ದರೆ, ಅನುಮಾನದ ಕತ್ತಿ ನೇತಾಡುತ್ತದೆ ಎಂದು ಹೇಳಿದರು. ‌

ಸರ್ಕಾರದ ಉದ್ದೇಶ ಸತ್ಯ ಹೊರಬರುವುದು. ದೂರುದಾರರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ವಿವಿಧ ಸಂಘಟನೆಗಳಿಂದ ಎಸ್‌ಐಟಿ ರಚಿಸುವಂತೆ ಬೇಡಿಕೆ ಬಂದಿತ್ತು. ಅದರಂತೆ ತನಿಖೆಯನ್ನು ಎಸ್‌ಐಟಿ ಎಂದು ಹೇಳಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ನಮಸ್ತೆ ಸೋನಿಯಾ ಅಂತಿದ್ರೆ ಡಿಕೆ ಶಿವಕುಮಾರ್‌ ಸಿಎಂ ಆಗ್ತಾ ಇದ್ರು: ಬಸನಗೌಡ ಪಾಟೀಲ್ ಯತ್ನಾಳ್