Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯರನ್ನು ದಿಢೀರ್ ಭೇಟಿಯಾದ ತೆಲುಗು ನಟ ರಾಮ್‌ ಚರಣ್‌

ಮುಖ್ಯಮಂತ್ರಿ ಸಿದ್ದರಾಮಯ್ಯ

Sampriya

ಮೈಸೂರು , ಭಾನುವಾರ, 31 ಆಗಸ್ಟ್ 2025 (17:35 IST)
Photo Credit X
ಮೈಸೂರು: ಭಾನುವಾರ ಸಿಎಂ ಸಿದ್ದರಾಮಯ್ಯ ಅವರನ್ನು ತೆಲುಗು ಚಿತ್ರರಂಗದ ಸ್ಟಾರ್‌ ನಟ ರಾಮ್‌ ಚರಣ್‌  ಮೈಸೂರಿನಲ್ಲಿ ಭೇಟಿಯಾದರಯ. 

ಮೈಸೂರಿನಲ್ಲಿ ಪೆದ್ದಿ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟ ರಾಮ್‌ ಚರಣ್, ಮೈಸೂರು ನಿವಾಸದಲ್ಲಿ ಸಿಎಂ ಭೇಟಿಯಾದರು. 

ಸಿದ್ದರಾಮಯ್ಯಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ನಟ ಗೌರವಿಸಿದರು. 

ಈ ವೇಳೆ ಸಚಿವ ಸಂತೋಷ್‌ ಲಾಡ್‌, ಸಿಎಂ ಪುತ್ರ ಹಾಗೂ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಕೂಡ ಇದ್ದರು. 

ರಾಮ್‌ಚರಣ್ ಅಭಿನಯಿಸುತ್ತಿರುವ ಪೆದ್ದಿ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ಭರದಿಂದ ಸಾಗಿದೆ.  ಅದ್ಧೂರಿ ಸೆಟ್ ಹಾಕಿ ಮಾಸ್ ಸಾಂಗ್‌ವೊಂದನ್ನು ಈಚೆಗೆ ಶೂಟಿಂಗ್ ನಡೆಸಲಾಗಿದೆ. 1,000 ಡ್ಯಾನ್ಸರ್ಸ್ ಜೊತೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಖ್ಯಾತ ಡ್ಯಾನ್ಸ್ ಮಾಸ್ಟರ್ ಜಾನಿ ಈ ಹಾಡಿಗೆ ಕೊರಿಯೋಗ್ರಾಫ್‌ ಮಾಡಿದ್ದಾರೆ. ಬಹಳ ಅದ್ಧೂರಿಯಾಗಿ ದೊಡ್ಡ ಬಜೆಟ್‌ನಲ್ಲಿ ಈ ಸಾಂಗ್ ಚಿತ್ರೀಕರಣ ನಡೆಸಲಾಗಿದೆ.

ರಾಮ್ ಚರಣ್‌ಗೆ ಜಾನ್ವಿ ಕಪೂರ್  ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಜಗಪತಿ ಬಾಬು ಮತ್ತು ದಿವೇಂದು ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್‌ಡೇಗೂ ಮುನ್ನ ಮೈಸೂರಿನಲ್ಲಿ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ಕಿಚ್ಚ ಸುದೀಪ್