ಬೆಂಗಳೂರು: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ ಮತದಾರ ಅಧಿಕಾರ ಯಾತ್ರೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆಂಬ ಮಾಹಿತಿಯಿದೆ.
ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ರಾಜ್ಯದ ಕೆಲ ಶಾಸಕರೊಂದಿಗೆ ಬಿಹಾರಕ್ಕೆ ತೆರಳಿ ರಾಹುಲ್ ನೇತೃತ್ವದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಅದರಂತೆ ಇಂದು ಬೆಳಗ್ಗೆ 9ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಪ್ರಯಾಣಬೆಳೆಸಲಿದ್ದಾರೆ. ಅಲ್ಲಿಂದ್ದ ರಸ್ತೆ ಮೂಲಕ ಬಿಹಾರದ ಗೋಪಾಲ್‌ಗಂಜ್ ನಗರ ತಲುಪಿ ಬಳಿಕ ಸಿವಾನ್‌ಗೆ ತೆರಳಿದ್ದಾರೆ.
ಇನ್ನೂ ಸಿಕ್ಕಿರುವ ಮಾಹಿತ ಪ್ರಕಾರ ರಾತ್ರಿಯೇ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ವಾಪಾಸ್ಸಾಗಲಿದ್ದಾರೆ. ಸಂಜೆ 4ರಿಂದ 6ರವರೆಗೆ ರ್ಯಾಲಿಯಲ್ಲಿ ಭಾಗವಹಿಸಿದ ಬಳಿಕ ಗೋರಖ್‌ಪುರಕ್ಕೆ ಆಗಮಿಸಿ ಅಲ್ಲಿಂದ್ದ ವಿಶೇಷ ವಿಮಾನದಲ್ಲಿ ರಾತ್ರಿ 11.35ಕ್ಕೆ ಬೆಂಗಳೂರಿಗೆ ವಾಪಾಸ್ಸಾಗಲಿದ್ದಾರೆ ಎಂದು ತಿಳಿದುಬಂದಿದೆ.